

ಮುಂಬೈ: ಬಾಲಿವುಡ್ನಲ್ಲಿನ ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಎನ್ಸಿಬಿ ವಿಚಾರಣೆ ನಡೆಸುತ್ತಿದೆ. ಇಡಿ ಮತ್ತು ಸಿಬಿಐ ಸಹ ತನಿಖೆಯಲ್ಲಿ ಭಾಗವಹಿಸಿವೆ. ಇತ್ತೀಚೆಗಷ್ಟೇ ನಟಿ ದೀಪಿಕಾ ಪಡುಕೋಣೆ ಹೆಸರು ಈ ಮಾಫಿಯಾದಲ್ಲಿ ತಳುಕು ಹಾಕಿಕೊಂಡಿದ್ದರಿಂದ ಅವರನ್ನೂ ವಿಚಾರಣೆಗೆ ಕರೆಸಲಾಗಿತ್ತು. ಈಗ ಮತ್ತೆ ಶೂಟಿಂಗ್ಗೆ ಮರಳಿದ್ದಾರೆ.
ಹೌದು, ಗೋವಾದಲ್ಲಿ ಶಕುನ್ ಬಾತ್ರಾ ನಿರ್ದೇಶನದಲ್ಲಿ ನಡೆಯುತ್ತಿರುವ ಶೂಟಿಂಗ್ನಲ್ಲಿ ದೀಪಿಕಾ ಭಾಗವಹಿಸಲಿದ್ದಾರೆ. ದೀಪಿಕಾ ಸಲುವಾಗಿ ಕಳೆದ 10 ದಿನಗಳಿಂದ ಶೂಟಿಂಗ್ ನಿಲ್ಲಿಸಿದ್ದ ತಂಡ, ಈಗ ಮತ್ತೆ ಚಿತ್ರೀಕರಣಕ್ಕೆ ಪ್ಲಾನ್ ಮಾಡಿದೆ. ಸಿದ್ಧಾಂಥ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಈಗಾಗಲೇ ಸೆಟ್ನಲ್ಲಿದ್ದು, ದೀಪಿಕಾ ಇಂದು ಅವರನ್ನು ಸೇರಲಿದ್ದಾರೆ.
ಇದನ್ನೂ ಓದಿ: PHOTOS| ಮನಾಲಿಯಲ್ಲಿ ಪ್ರಣೀತಾ ಹಂಗಾಮಾ
ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಜತೆಗೆ ಕೆಲ ವರ್ಷಗಳ ಹಿಂದೆ ನಡೆಸಿದ್ದ ವಾಟ್ಸಾಪ್ ಚಾಟ್ನಲ್ಲಿ ಡ್ರಗ್ಸ್ ವಿಚಾರವಾಗಿ ದೀಪಿಕಾ ಮಾತನಾಡಿದ್ದರು. ಅದರ ಹಿನ್ನೆಲೆ ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಸುದೀರ್ಘ 4 ಗಂಟೆ ದೀಪಿಕಾರನ್ನು ಎನ್ಸಿಬಿ ವಿಚಾರಣೆ ನಡೆಸಿತ್ತು. ಇದೀಗ ಅದೆಲ್ಲವನ್ನು ಮುಗಿಸಿಕೊಂಡಿರುವ ಅವರು, ಶೂಟಿಂಗ್ನಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)