ದೀಪಿಕಾ ಪಡುಕೋಣೆ ಬಾಡಿಗಾರ್ಡ್​ ಸಂಬಳ ಕೇಳಿದ್ರೆ ನೀವು ಶಾಕ್​ ಆಗುವುದು ಗ್ಯಾರಂಟಿ!!

deepika
Published on

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಸದ್ಯ ಬಿಟೌನ್​ನ ಟಾಪ್​ ನಟಿ. ಸ್ಟಾರ್ ಹೀರೋಗಳು ಒಂದು ಸಿನಿಮಾಕ್ಕೆ ಪಡೆಯುವಷ್ಟು ಸಂಭಾವನೆ ಪಡೆಯುವ ತಾಕತ್ತು ಈ ನಟಿಗಿದೆ. ಈಗಾಗಲೇ ಪಡೆದುಕೊಂಡಿದ್ದೂ ಉಂಟು. ಇನ್ನೂ ಒಂದು ಕೈ ಮುಂದೆ ಹೋಗಿ ಸಿನಿಮಾ ನಿರ್ಮಾಣ ಮಾಡಿ, ಕೋಟಿ ಕೋಟಿ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಇಂಥ ಸ್ಟಾರ್ ನಟಿಯ ಬಾಡಿಗಾರ್ಡ್​ ಸಂಬಳ ಎಷ್ಟಿರಬಹುದು? ನಿಜಕ್ಕೂ ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗಬಹುದು. ಆದರೆ, ಆ ಕಷ್ಟದ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಹೌದು, ಕಳೆದ ಹಲವು ವರ್ಷಗಳಿಂದ ದೀಪಿಕಾ ಬಾಡಿಗಾರ್ಡ್​ ಆಗಿ ಜಲಾಲ್​ ಕೆಲಸ ಮಾಡುತ್ತಿದ್ದಾರೆ. ದೀಪಿಕಾ ಎಲ್ಲೇ ಹೋದರೂ ಅವರನ್ನು ಕಾಯುವ ಕೆಲಸವನ್ನು ಇಲ್ಲಿಯವರೆಗೂ ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದ್ದಾರೆ ಜಲಾಲ್​. ಅಷ್ಟೇ ಅಲ್ಲ ಜಲಾಲ್​ ದೀಪಿಕಾ ಪಾಲಿಗೆ ಕೇವಲ ಬಾಡಿಗಾರ್ಡ್​ ಆಗಿಲ್ಲ. ಒಬ್ಬ ಸಹೋದರನಂತೆ ನನ್ನ ಬೆನ್ನಿಗಿರುತ್ತಾರೆ ಎಂದು ದೀಪಿಕಾ ಸಹ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಹೀಗಿರುವಾಗ ಜಲಾಲ್​ಗೆ ದೀಪಿಕಾ ನೀದುವ ಸಂಬಳ ಎಷ್ಟು ಗೊತ್ತ? ವಾರ್ಷಿಕ ಬರೋಬ್ಬರಿ 1 ಕೋಟಿ ರೂಪಾಯಿ!!

2017ರಲ್ಲಿ ವಾರ್ಷಿಕ 80 ಲಕ್ಷ ಸಂಬಳ ಪಡೆಯುತ್ತಿದ್ದ ಜಲಾಲ್​, ಇದೀಗ ಅವರ ಸಂಬಳ 1 ಕೋಟಿ ಮೀರಿದೆ ಎಂದರೆ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಈ ಮೂಲಕ ಪ್ರತಿ ತಿಂಗಳಿಗೆ 8.33 ಲಕ್ಷ ಸಂಬಳ ಪಡೆಯುತ್ತಿದ್ದಾರೆ ಜಲಾಲ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net