ಕರೊನಾ​ ಹೊತ್ತಲ್ಲಿ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದು ಹೇಗೆ? ಡಬ್ಲೂಎಚ್​ಒ ನಿರ್ದೇಶಕರ ಜತೆ ದೀಪಿಕಾ ಪಡುಕೋಣೆ ಇನ್​ಸ್ಟಾಗ್ರಾಂ ಲೈವ್​

WhatsApp Image 2020-04-20 at 12.26.32 PM
Published on

ಕರೊನಾ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಹಾಗಾದರೆ ಆ ಮೆಂಟಲ್ ಹೆಲ್ತ್ ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಏನೆಲ್ಲ ಮಾಡಬೇಕು. ಕರೊನಾ ಹೊತ್ತಲ್ಲಿ ಮನಸ್ಸನ್ನು ಸದೃಢ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಹೇಳಲು ದೀಪಿಕಾ ಪಡುಕೋಣೆ ಇನ್​ಸ್ಟಾಗ್ರಾಂ ಲೈವ್​ ಬರಲಿದ್ದಾರೆ. ಕೇವಲ ಅವರಷ್ಟೇ ಅವರ ಜತೆ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆದ್ರೊಸ್​ ಅಧಾನಮ್ ಗ್ಯಾಬ್ರಿಯಾಸಿಸ್ ಸಹ ಲೈವ್​ನಲ್ಲಿರಲಿದ್ದಾರೆ. ಅಂದಹಾಗೆ ಆಫಿಶಿಯಲ್​ ಇನ್​ಸ್ಟಾಗ್ರಾಂನಲ್ಲಿ ಗುರುವಾರ ರಾತ್ರಿ 7.30ಕ್ಕೆ ಮಾನಸಿಕ ಆರೋಗ್ಯದ ಬಗ್ಗೆ ದೀಪಿಕಾ ಮಾತನಾಡಲಿದ್ದಾರೆ.
ಹಾಗಾದರೆ, ಡಬ್ಲೂಎಚ್​ಒ ದೀಪಿಕಾ ಅವರನ್ನೇ ಆಯ್ದುಕೊಂಡಿದ್ದೇಕೆ? ​ಕೆಲ ವರ್ಷಗಳ ಹಿಂದೆ ದೀಪಿಕಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಡಿಪ್ರೆಷನ್​ಗೆ ಒಳಗಾಗಿದ್ದರು. ಬಳಿಕ ಮಾನಸಿಕ ಆರೋಗ್ಯ ವೃದ್ಧಿಸಿಕೊಂಡು, ಡಿಪ್ರೆಷನ್ ನಿವಾರಣೆಗೆ ಎನ್​ಜಿಒ ತೆರೆದಿದ್ದರು. ಆ ಕಾರಣಕ್ಕೆ ಡಬ್ಲೂಎಚ್​ಒ ದೀಪಿಕಾ ಅವರನ್ನು ಈ ಕಾರ್ಯಕ್ಕೆ ಆಯ್ದುಕೊಂಡಿದೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net