

ಬಾಲಿವುಡ್ನ ಟಾಪ್ ನಟಿ ದೀಪಿಕಾ ಪಡುಕೋಣೆ, ಈಗಾಗಲೇ ಸಾಲುಸಾಲು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ, ಟಾಲಿವುಡ್ಗೂ ಪದಾರ್ಪಣೆ ಮಾಡಿದ್ದಾರೆ. ಇದೀಗ ಕೆಲ ವರ್ಷಗಳ ಬಳಿಕ ಮತ್ತೆ ಹಾಲಿವುಡ್ನತ್ತ ಮುಖ ಮಾಡುತ್ತಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲ, ಆ ಚಿತ್ರ ನಿರ್ವಣದಲ್ಲೂ ಅವರು ಕೈ ಜೋಡಿಸುತ್ತಿರುವುದು ವಿಶೇಷ. ಹಾಲಿವುಡ್ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಎಸ್ಟಿಎಕ್ಸ್ ಫಿಲಂಸ್ ಮತ್ತು ಟೆಂಪಲ್ ಹಿಲ್ ಪ್ರೊಡಕ್ಷನ್ಸ್ ಜಂಟಿಯಾಗಿ ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಸಿನಿಮಾ ಘೋಷಣೆ ಮಾಡಿದೆ. ಈ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ಕಾಣಿಸಿಕೊಳ್ಳುವುದರ ಜತೆಗೆ ತಮ್ಮದೆ ‘ಕಾ’ ಹೋಮ್ ಬ್ಯಾನರ್ ಮೂಲಕ ಚಿತ್ರ ನಿರ್ವಣದಲ್ಲಿಯೂ ಪಾಲುದಾರಿಕೆ ಹೊಂದಿದ್ದಾರೆ.
2020ರಲ್ಲಿ ತೆರೆಕಂಡಿದ್ದ ‘ಚಪಾಕ್’ ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿದ್ದ ದೀಪಿಕಾ, ಅದಾದ ಬಳಿಕ ಚಿತ್ರ ನಿರ್ವಣದ ಕಡೆ ದೃಷ್ಟಿ ಹಾಯಿಸಿರಲಿಲ್ಲ. ಇನ್ನು, 2017ರಲ್ಲಿ ‘ಎಕ್ಸ್ಎಕ್ಸ್ ಎಕ್ಸ್; ರಿಟರ್ನ್ ಆಫ್ ಕ್ಸಾಂಡರ್ ಕೇಜ್’ ಸಿನಿಮಾದಲ್ಲಿ ದೀಪಿಕಾ ನಟಿಸಿದ್ದರು. ಹಾಲಿವುಡ್ನ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಅವರ ಹೆಸರು ಕೇಳಿಬಂದಿತ್ತಾದರೂ ಯಾವುದೂ ಅಧಿಕೃತವಾಗಿರಲಿಲ್ಲ. ಇದೀಗ ನಾಲ್ಕು ವರ್ಷಗಳ ಬಳಿಕ ದೀಪಿಕಾ, ಹಾಲಿವುಡ್ಗೆ ಜಿಗಿದಿದ್ದಾರೆ. ಸದ್ಯ, ಹಿಂದಿಯಲ್ಲಿ ಶಾರುಖ್ ಜತೆಗೆ ‘ಪಠಾಣ್’, ಹೃತಿಕ್ ಅಭಿನಯದ ‘ಫೈಟರ್’, ತೆಲುಗಿನಲ್ಲಿ ಪ್ರಭಾಸ್ ಜತೆಗೆ ಶೀರ್ಷಿಕೆ ಅಂತಿಮವಾಗದ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. -ಏಜೆನ್ಸೀಸ್