

ಲೂಸ್ ಮಾದ ಯೋಗಿ ನಟನೆಯ ‘ಒಂಬತ್ತನೇ ದಿಕ್ಕು’ ಚಿತ್ರ ಹಲವು ಕಾರಣಗಳಿಂದ ವಿಶೇಷವೆನಿಸಿದೆ. ಈಗಾಗಲೇ ಹೊರ ಬಂದಿರುವ ಟೀಸರ್, ಸಿನಿಮಾದಲ್ಲೇನಿದೆ ಎಂಬುದನ್ನು ತೋರಿಸಿದೆ. ದಯಾಳ್ ಪದ್ಮನಾಭನ್ ನಿರ್ದೇಶನ ಮತ್ತು ನಿರ್ವಣದ ಈ ಚಿತ್ರದಲ್ಲಿ ಯೋಗಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ದ್ದಾರೆ. ಕ್ರೖೆಂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ. ಗುರು ದೇಶಪಾಂಡೆ ನಿರ್ವಣದಲ್ಲಿ ಸಾಥ್ ನೀಡಿದ್ದಾರೆ.
ರಾಮು ಫಿಲಂಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ ಪ್ರಜ್ವಲ್ ದೇವರಾಜ್ ನಟನೆಯ ‘ಅರ್ಜುನ್ ಗೌಡ’ ಚಿತ್ರ ಕಳೆದ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ ಕೋವಿಡ್ ಕಾರಣ ಮತ್ತು ರಾಮು ಅವರ ನಿಧನದಿಂದಾಗಿ ಬಿಡುಗಡೆಯನ್ನೇ ಚಿತ್ರತಂಡ ಮುಂದೂಡಿತ್ತು. ಇದೀಗ ಅದೆಲ್ಲವನ್ನು ದಾಟಿ ರಿಲೀಸ್ ಹಂತಕ್ಕೆ ಬಂದಿದೆ. 31ರಂದೇ ಈ ಚಿತ್ರವೂ ತೆರೆಗೆ ಬರುತ್ತಿದ್ದು, ಪ್ರಜ್ವಲ್ಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಧರ್ಮ ವಿಶ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ ಮಾಡಿದ್ದಾರೆ.
ಅಜೇಯ್ ರಾವ್ ಮತ್ತು ರಚಿತಾ ರಾಮ್ ಕಾಂಬಿನೇಷನ್ನ ಮೊದಲ ಸಿನಿಮಾ ‘ಲವ್ ಯೂ ರಚ್ಚು’ ಇದೇ ತಿಂಗಳ 31ಕ್ಕೆ ತೆರೆಗೆ ಬರಲಿದೆ. ರೊಮ್ಯಾಂಟಿಕ್ ಲವ್ಸ್ಟೋರಿ ಹಿನ್ನೆಲೆಯ ಈ ಚಿತ್ರಕ್ಕೆ ಶಂಕರ್ ಎಸ್. ರಾಜ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಮೂರು ಹಾಡಿನ ಮೂಲಕವೇ ಒಂದಷ್ಟು ಸದ್ದು ಮಾಡಿರುವ ಲವ್ ಯೂ ರಚ್ಚು ಸಿನಿಮಾದ ಟ್ರೇಲರ್ ಡಿಸೆಂಬರ್ 16ಕ್ಕೆ ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ವಿುಸಿದ್ದಾರೆ.
ಇತ್ತ ನಟ ದಿಗಂತ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಂದರೆ, ನಾಗರಾಜ್ ಬೇತೂರ್ ನಿರ್ದೇಶನ ಮಾಡಿರುವ ಹುಟ್ಟು ಹಬ್ಬದ ಶುಭಾಶಯಗಳು ಚಿತ್ರವೂ ವರ್ಷಾಂತ್ಯಕ್ಕೆ ಬಿಡುಗಡೆ ಆಗುತ್ತಿದೆ. ಪೋಸ್ಟರ್ ಮೂಲಕವೇ ಕುತೂಹಲ ಹೆಚ್ಚಿಸಿದ್ದ ಈ ಸಿನಿಮಾ, ಇದೀಗ ಚಿತ್ರಮಂದಿರದತ್ತ ದಾಪುಗಾಲಿಡಲು ಸಿದ್ಧತೆ ನಡೆಸಿದೆ. ದಿಗಂತ್ಗೆ ಕವಿತಾ ಗೌಡ ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಟಿ. ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ, ಶ್ರೀಧರ್ ವಿ ಸಂಭ್ರಮ್ ಸಂಗೀತ. ಅಭಿಲಾಷ್ ಛಾಯಾಗ್ರಹಣವಿದೆ.