

ಬೆಂಗಳೂರು: ಮಕ್ಕಳಲ್ಲಿ ಉಸಿರಾಟದ ಸಮಸ್ಯೆ .. ಈ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ನಾಗರಾಜ್ ಎಂಜಿ ಗೌಡ ‘ಡಿಸೆಂಬರ್ 24’ ಹೆಸರಿನ ಸಿನಿಮಾ ಮಾಡಿದ್ದಾರೆ. ಕಳೆದ ಕೆಲ ವರ್ಷ ಈ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿರುವ ನಿರ್ದೇಶಕರು ಇದೀಗ ಸಿನಿಮಾ ರೂಪದಲ್ಲಿ ತೆರೆಮೇಲೆ ತರಲು ಸಿದ್ಧರಾಗಿದ್ದಾರೆ.
ಇತ್ತೀಚೆಗಷ್ಟೇ ಈ ಚಿತ್ರದ ಮೋಷನ್ ಪೋಸ್ಟರ್ ಮತ್ತು ಹಾಡುಗಳು ಬಿಡುಗಡೆ ಆಗಿದ್ದು, ನಟ ಶ್ರೀನಗರ ಕಿಟ್ಟಿ, ಕೋಡಿಹಳ್ಳಿ ಚಂದ್ರಶೇಖರ್, ಬಾಮಾ ಹರೀಶ್ ಆಗಮಿಸಿ ಹೊಸತಂಡದ ಬೆನ್ನು ತಟ್ಟಿದ್ದಾರೆ. ‘ಡಿಸೆಂಬರ್ 24’ ಶೀರ್ಷಿಕೆಗೂ ಕಥೆಗೂ ಎಲ್ಲಿಂದ ಎಲ್ಲಿಯ ಸಂಬಂಧ? ಈ ಬಗ್ಗೆ ಉತ್ತರಿಸುವ ನಿರ್ದೇಶಕರು, ‘ಉಸಿರಾಟದ ಸಮಸ್ಯೆಯಿಂದ ಮರಣಹೊಂದುತ್ತಿರುವ ಮಕ್ಕಳನ್ನು ರಕ್ಷಿಸಲು ವೈದ್ಯಕೀಯ ಸಂಶೋಧನೆಗೆಂದು ಕಾಡಿಗೆ ತೆರಳುವ 7 ಜನ ವೈದ್ಯ ವಿದ್ಯಾರ್ಥಿಗಳ ಕಥೆ ಇದು’ ಎನ್ನುತ್ತಾರೆ. ಚಿತ್ರದಲ್ಲಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ, ರಘು ಶೆಟ್ಟಿ, ಭೂಮಿಕಾ, ಮಿಲನಾ ಚಿತ್ರದಲ್ಲಿದ್ದಾರೆ. ಎಂ.ಜಿ.ಎನ್ ಪ್ರೊಡಕ್ಷನ್ಸ್ನಲ್ಲಿ ಚಿತ್ರ ನಿರ್ವಣವಾಗಿದೆ.