ದರ್ಶನ್​ ಬರ್ತ್​​ಡೇಗೆ ರಾಬರ್ಟ್ ಟ್ರೇಲರ್​; ಸೆನ್ಸೆಷನ್ ಸೃಷ್ಟಿಸಿದ ಮಾಸ್​ ಅಲ್ಲ ಬಾಸ್​ ಡೈಲಾಗ್​

Darshan
Published on
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಟ್ರೇಲರ್​ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ಬಿಡುಗಡೆಯಾಗಿದೆ. ಈಗಾಗಲೇ ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ದುಪ್ಪಟ್ಟುಗೊಳಿಸಿದ್ದ ತಂಡ ಇದೀಗ ಟ್ರೇಲರ್​ ಬಿಡುಗಡೆ ಮಾಡಿ ಅಭಿಮಾನಿಗಳ ಎದೆಬಡಿತವನ್ನು ಮತ್ತಷ್ಟು ಹೆಚ್ಚಿಸಿದೆ.
ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬ ಬಗ್ಗೆ ಈ ಹಿಂದಿನ ಪೋಸ್ಟ್​ಗಳಲ್ಲಿ ಎಲ್ಲಿಯೂ ಗುಟ್ಟು ಬಿಟ್ಟುಕೊಡದ ರಾಬರ್ಟ್ ತಂಡ, ಟ್ರೇಲರ್​ನಲ್ಲಿ ಪಾತ್ರಗಳ ಪರಿಚಯವಾಗಿದೆ. ಡೈನಾಮಿಕ್ ಹೀರೋ ದೇವರಾಜ್​, ನಾಯಕಿ ಆಶಾ ಭಟ್​, ಖಳನಾಯಕ ಜಗಪತಿ ಬಾಬು, ವಿನೋದ್​ ಪ್ರಭಾಕರ್​, ರವಿ ಕಿಶನ್​, ರವಿಶಂಕರ್ ಸೇರಿ ಹಲವರ ಪಾತ್ರ ರಿವೀಲ್ ಆಗಿದೆ. ಮಾರ್ಚ್​ 11ಕ್ಕೆ ಕನ್ನಡದ ಜತೆಗೆ ತೆಲುಗು ಭಾಷೆಯಲ್ಲಿಯ ರಾಬರ್ಟ್ ಸಿನಿಮಾ ಬಿಡುಗಡೆ ಆಗಲಿದ್ದು, ಆ ಭಾಗದಿಂದಲೂ ಚಿತ್ರಕ್ಕೆ ಒಳ್ಳೇ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಬಿಡುಗಡೆ ಆಗಿರುವ ತೆಲುಗು ಟ್ರೇಲರ್​ಗೆ ಮೆಚ್ಚುಗೆ ಸಿಕ್ಕಿದೆ.

ಇದನ್ನೂ ಓದಿ: ‘ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ’ಗೆ ಉಮಾಶ್ರೀ ಮಾತು

ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಈ ವರ್ಷದ ಬರ್ತ್​ಡೇ ಆಚರಣೆ ಇರುವುದಿಲ್ಲ. ದಯಮಾಡಿ ಮನೆ ಬಳಿ ಯಾರೂ ಬರಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ದರ್ಶನ್​ ಹೇಳಿಕೊಂಡಿದ್ದರು. ಅದರಂತೆ ಮನೆ ಬಾಗಿಲು ಬಳಿ ಬೋರ್ಡ್ ಸಹ ಹಾಕಲಾಗಿದ್ದು, ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಆದರೆ, ಈ ವಿಚಾರ ಗೊತ್ತಿಲ್ಲದ ಹಲವು ಅಭಿಮಾನಿಗಳು ತಡರಾತ್ರಿಯಿಂದಲೇ ದರ್ಶನ್ ಮನೆ ಬಳಿ ಜಮಾವಣೆ ಆಗಿದ್ದರು.
ಇನ್ನು ಇತ್ತ ಚಂದನವನದ ಸಿನಿಮಾಮಂದಿ ದರ್ಶನ್​ಗೆ ಸೋಷಿಯಲ್ ಮೀಡಿಯಾ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಭಿಮಾನಿ ವಲಯದಲ್ಲಿ ದೊಡ್ಡ ಹಬ್ಬದಂತೆ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಸಿಡಿಪಿ ಬಿಡುಗಡೆ ಮಾಡಿ, ಸಂಭ್ರಮಿಸುತ್ತಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net