ಸುಶಾಂತ್ ಬಳಿಕ ಎಂ.ಎಸ್. ಧೋನಿ ಚಿತ್ರದ ಮತ್ತೋರ್ವ ನಟ ಆತ್ಮಹತ್ಯೆ! ಸಾವಿಗೂ ಮುನ್ನ ವಿಡಿಯೋ ಶೇರ್​

ms dhoni film-sushant and sandeep
Published on

ಗೋರೆಗಾಂವ್​(ಮಹಾರಾಷ್ಟ್ರ): ಬಾಲಿವುಡ್​ ನಟ ಸುಶಾಂತ್ ಸಿಂಗ್ ಬಳಿಕ ಎಂ.ಎಸ್​.ದೋನಿ ಚಿತ್ರದ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ.

ಮುಂಬೈನ ಗೋರೆಗಾಂವ್​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಯುವನಟ ಸಂದೀಪ್‌ ನಹಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಫೇಸ್​ಬುಕ್​ ಅಕೌಂಟ್​ನಲ್ಲಿ ವಿಡಿಯೋ ಶೇರ್ ಮಾಡಿರುವ ಸಂದೀಪ್​, ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ರಜಪೂತ್ ಜತೆ ಎಂಎಸ್ ಧೋನಿ; ದಿ ಅನ್​ಟೋಲ್ಡ್ ಸ್ಟೋರಿ ಹಾಗೂ ಅಕ್ಷಯ್​ ಕುಮಾರ್​ ಅವರೊಂದಿಗೆ ಕೇಸರಿ ಚಿತ್ರದಲ್ಲಿ ಸಂದೀಪ್ ನಹಾರ್​ ನಟಿಸಿದ್ದರು. ಎಂಎಸ್ ಧೋನಿ ಬಯೋಪಿಕ್​ ಚಿತ್ರದಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರು ದೋನಿ ಪಾತ್ರ ನಿರ್ವಹಿಸಿದ್ದರು. ಸಂದೀಪ್ ನಹಾರ್​ ಅವರು ದೋನಿ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸುಶಾಂತ್ ಸಿಂಗ್​ ಅಗಲಿಕೆಯ ನೋವು ಅಭಿಮಾನಿಗಳ ಮನದಲ್ಲಿ ಇನ್ನೂ ಮಾಸಿಲ್ಲ. ಇದೀಗ ಮತ್ತೋರ್ವ ನಟ ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತ. ಸಾಲ ಹಾಗೂ ಕಿರುಕುಳದ ಬಗ್ಗೆ ಡೆತ್​ನೋಟ್​ನಲ್ಲಿ ಸಂದೀಪ್ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಾವಿಗೂ ಮುನ್ನ ಮಾನಸಿಕ ಸಮಸ್ಯೆಯ ಬಗ್ಗೆ ಹೇಳಿಕೊಂಡಿರೋ ಸಂದೀಪ್, ತನ್ನ ಸಾವಿಗೆ ಲತ್ನಿ ಕಾರಣವಲ್ಲ ಅಂತ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net