ಒಂದು ಫೋನ್​ ಕಾಲ್‌ನಲ್ಲಿ ಜವಾಬ್ದಾರಿ ತೆಗೆದುಕೊಂಡರು ದರ್ಶನ್

Bullet and Darshan Final
Published on

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಬುಲೆಟ್ ಪ್ರಕಾಶ್ ಅವರು ಸೋಮವಾರ ನಿಧನರಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಮಗಳ ಮದುವೆಯ ಜವಾಬ್ದಾರಿಯನ್ನು ದರ್ಶನ್ ತೆಗೆದುಕೊಂಡಿದ್ದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ದರ್ಶನ್ ಈ ಜವಾಬ್ದಾರಿ ತೆಗೆದುಕೊಂಡಿದ್ದು ಹೇಗೆ? ಕೇವಲ ಒಂದೇ ಒಂದು ಫೋನ್ ಕಾಲ್‌ನಲ್ಲಿ ಇವೆಲ್ಲಾ ಆಯಿತು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.

ಹೌದು, ಸೋಮವಾರ ಮಧ್ಯಾಹ್ನ ‘ದುನಿಯಾ’ ವಿಜಯ್, ಧ್ರುವ ಸರ್ಜಾ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ, ಬುಲೆಟ್ ಪ್ರಕಾಶ್ ಅವರ ಆರೋಗ್ಯ ವಿಚಾರಿಸಿ ಬಂದರು. ಈ ಸಂದರ್ಭದಲ್ಲಿ ದರ್ಶನ್ ಅವರಿಗೆ ಬರಲಾಗಲಿಲ್ಲ. ಆಸ್ಪತ್ರೆಯಲ್ಲಿದ್ದ ನಿರ್ಮಾಪಕ ಎಂ.ಜಿ. ರಾಮಮೂರ್ತಿ ದರ್ಶನ್ ಅವರಿಗೆ ಫೋನ್ ಮಾಡಿದ್ದಾರೆ. ಆಗ ದರ್ಶನ್, ಬುಲೆಟ್ ಅವರ ಪತ್ನಿಯ ಜತೆಗೂ ಮಾತನಾಡಿದ್ದಾರೆ. ಅವರಿಗೆ ಧೈರ್ಯ ಹೇಳುವುದರ ಜತೆಗೆ ಫೋನ್‌ನಲ್ಲೇ ಪ್ರಕಾಶ್ ಮದುವೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ದರ್ಶನ್ ಹೇಳಿದರಂತೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಎಂ.ಜಿ. ರಾಮಮೂರ್ತಿ, ‘ಆಸ್ಪತ್ರೆಯಲ್ಲಿದ್ದಾಗ ದರ್ಶನ್ ಅವರಿಗೆ ಫೋನ್ ಮಾಡಿದ್ದೆ. ಪ್ರಕಾಶ್ ಅವರು ಐಸಿಯುನಲ್ಲಿದ್ದ ಕಾರಣ ಅವರ ಪತ್ನಿಯ ಜತೆಗೆ ದರ್ಶನ್ ಫೋನ್ ಮಾಡಿ ಧೈರ್ಯ ಹೇಳಿದರು. ಆಗ ಪ್ರಕಾಶ್ ಮಗಳ ಜವಾಬ್ದಾರಿಯನ್ನೂ ವಹಿಸಿಕೊಳ್ಳುವುದಾಗಿ ದರ್ಶನ್ ಹೇಳಿದರು’ ಎನ್ನುತ್ತಾರೆ ಎಂ.ಜಿ. ರಾಮಮೂರ್ತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net