

ಬೆಂಗಳೂರು: ಫೆಬ್ರವರಿ 14ರ ಪ್ರೇಮಿಗಳ ದಿನದಂದು ‘ಮದರಂಗಿ’ ಕೃಷ್ಣ ಮತ್ತು ಮಿಲನಾ ನಾಗರಾಜ್ ಮದುವೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಮದುವೆಗೆ ದಿನಗಣನೆ ಶುರುವಾಗಿದ್ದು, ಕಳೆದ ಕೆಲವು ದಿನಗಳಿಂದ ಕೃಷ್ಣ ಮತ್ತು ಮಿಲನಾ ಹಲವು ನಟ-ನಟಿಯರಿಗೆ ತಮ್ಮ ಮದುವೆಯ ಆಹ್ವಾನ ಪತ್ರಿಕೆಯನ್ನು ಕೊಟ್ಟು, ಪ್ರೀತಿಯಿಂದ ಆಹ್ವಾನಿಸುತ್ತಿದ್ದಾರೆ. ಶಿವರಾಜಕುಮಾರ್, ಯಶ್, ಸುದೀಪ್, ನಿಖಿಲ್ ಕುಮಾರ್ ಸೇರಿ ಕನ್ನಡ ಚಿತ್ರರಂಗದ ಅನೇಕರಿಗೆ ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ. ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ತೆಲುಗಿನ ತಮನ್ನಾ ಭಾಟಿಯಾ, ಸತ್ಯದೇವ್ ಮುಂತಾದವರನ್ನೂ ಭೇಟಿ ಮಾಡಿ, ಮದುವೆಗೆ ಆಹ್ವಾನಿಸಿದ್ದಾರೆ. ಈ ಜೋಡಿಯ ಜನಪ್ರಿಯ ಚಿತ್ರ ‘ಲವ್ ಮಾಕ್ಟೇಲ್’ ಇದೀಗ ತೆಲುಗಿಗೆ ‘ಗುರ್ತಂಡ ಸೀತಾಕಲಂ’ ಎಂಬ ಹೆಸರಿನಲ್ಲಿ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ತಮನ್ನಾ, ಸತ್ಯದೇವ್ ನಟಿಸುತ್ತಿದ್ದಾರೆ.