'ಟಾಪ್​ ಬಿಚ್ಚಿ, ಬರಿ ಬ್ರಾನಲ್ಲಿ ಡೈಲಾಗ್​ ಹೇಳು ಅಂದಿದ್ರು!' ಜಿಯಾ ಖಾನ್​ ಬದುಕಿನ ಕಹಿ ಘಟನೆ ಬಿಚ್ಚಿಟ್ಟ ಸಹೋದರಿ

ಜಿಅಹ
Published on

ಮುಂಬೈ: ಬಾಲಿವುಡ್​ ನಟಿ ಜಿಯಾ ಖಾನ್​ ಆತ್ಮಹತ್ಯೆ ಮಾಡಿಕೊಂಡು ಏಳು ವರ್ಷಗಳು ಕಳೆದಿದೆ. ಆಕೆಯ ಬಾಲಿವುಡ್​ ಜೀವನದ ಬಗ್ಗೆ ಇದೀಗ ಬ್ರಿಟನ್​ನಲ್ಲಿ ಒಂದು ಪುಸ್ತಕ ಬಿಡುಗಡೆ ಮಾಡಲಾಗಿದೆ. ಡೆತ್​ ಇನ್​ ಬಾಲಿವುಡ್​ ಹೆಸರಿನ ಪುಸ್ತಕ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಜಿಯಾ ಖಾನ್​ ಮೇಲೆ ಆದ ಲೈಂಗಿಕ ಕಿರುಕುಳದ ಕಥೆಯನ್ನು ಆಕೆಯ ಸಹೋದರಿ ಬಿಚ್ಚಿಟ್ಟಿದ್ದಾರೆ.

ಜಿಯಾ ಖಾನ್​ಗೆ ನಿರ್ದೇಶಕ ಸಾಜಿದ್​ ಖಾನ್​ ಲೈಂಗಿಕ ಕಿರುಕುಳ ನೀಡಿದ್ದರಂತೆ. ಕೈಗೆ ಸ್ಕ್ರಿಪ್ಟ್​ ಕೊಟ್ಟು, ನಿನ್ನ ಟಾಪ್ ತೆಗೆದು ಬರಿ ಬ್ರಾನಲ್ಲಿ ನಿಂತು ಡೈಲಾಗ್​ ಹೇಳು ಎಂದಿದ್ದರಂತೆ. ಅದಕ್ಕೆ ಒಪ್ಪದ ಜಿಯಾ ಮನೆಗೆ ಬಂದು ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಅಗ್ರಿಮೆಂಟ್​ ಮುರಿದೆನೆಂದು ಸಾಜಿದ್​ ಖಾನ್ ಮೊಕದ್ದಮೆ ಹಾಕುತ್ತಾರೆಂದು ಜಿಯಾ ಹೆದರಿದ್ದರಂತೆ. ನನ್ನನ್ನು ಸಿನಿಮಾಗಳಿಂದ ಕಿತ್ತು ಹಾಕಿ ಬಿಡುತ್ತಾರೆ ಎನ್ನುವ ಭಯದಲ್ಲಿ ಆಕೆಯಿದ್ದಳು ಎಂದು ಸಹೋದರಿ ಕರೀಷ್ಮಾ ಹೇಳಿದ್ದಾರೆ.

ಕರೀಷ್ಮಾರ ಈ ಹೇಳಿಕೆಗೆ ಬಾಲಿವುಡ್​ ನಟಿ ಕಂಗನಾ ರಣಾವತ್​ ಸ್ಪಂದಿಸಿದ್ದಾರೆ. "ಅವರು ಜಿಯಾಳನ್ನು ಕೊಂದರು. ಸುಶಾಂತ್​ನ್ನು ಕೊಂದರು ಮತ್ತು ನನ್ನನ್ನೂ ಕೊಲ್ಲಲು ಪ್ರಯತ್ನಿಸಿದರು. ಆದರೂ ಯಾವುದೇ ಭಯವಿಲ್ಲದೆ ಮುಕ್ತವಾಗಿ ಓಡಾಡುತ್ತಾರೆ. ಮಾಫಿಯಾದ ಸಂಪೂರ್ಣ ಬೆಂಬಲ ಅವರಿಗಿದೆ. ಪ್ರತಿವರ್ಷ ಇನ್ನಷ್ಟು ಪ್ರಬಲ ಮತ್ತು ಯಶಸ್ವಿಯಾಗುತ್ತಿದ್ದಾರೆ." ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net