ರೊಮ್ಯಾಂಟಿಕ್ ಕಾಮಿಡಿಯಲ್ಲಿ ಕೃಷ್ಣ: ಶೇಖರ್ ನಿರ್ದೇಶನ, ಚಂದ್ರು ನಿರ್ಮಾಣ

Krishna Shekhar
Published on

ಬೆಂಗಳೂರು: ಮಾನ್ವಿತಾ ಕಾಮತ್ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಹೇಳಿದ್ದ ನಿರ್ದೇಶಕ ಪಿ.ಸಿ. ಶೇಖರ್, ಅದು ಶುರುವಾಗುವುದಕ್ಕಿಂತ ಮುನ್ನವೇ ಇನ್ನೊಂದು ಚಿತ್ರ ಘೋಷಿಸಿದ್ದಾರೆ. ಈ ಬಾರಿ ‘ಮದರಂಗಿ’ ಕೃಷ್ಣ ಅಭಿನಯದ ಚಿತ್ರವೊಂದನ್ನು ಅವರು ನಿರ್ದೇಶಿಸಲಿದ್ದು, ‘ಕಡ್ಡಿಪುಡಿ’ ಚಂದ್ರು ನಿರ್ಮಾಣ ಮಾಡಲಿದ್ದಾರೆ.

ಹೊಸ ಚಿತ್ರದ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಶೇಖರ್, ‘ಲಾಕ್​ಡೌನ್ ಸಮಯದಲ್ಲಿ ಒಂದಿಷ್ಟು ಚಿತ್ರಕಥೆಗಳನ್ನು ಮಾಡಿಟ್ಟುಕೊಂಡಿದ್ದೆ. ಇತ್ತೀಚೆಗೆ, ಚಂದ್ರು ಅವರನ್ನು ಭೇಟಿಯಾಗುವ ಸಂದರ್ಭ ಬಂತು. ಆಗ ಅವರಿಗೆ ಚಿತ್ರದ ಒನ್​ಲೈನ್ ಹೇಳಿದೆ. ಹೀರೋ ಯಾರಿದ್ದರೆ ಚೆನ್ನ ಎಂದು ಕೇಳಿದರು. ನಾನು ಕೃಷ್ಣ ಅವರ ಹೆಸರನ್ನು ಹೇಳಿದ್ದೆ. ಮರುದಿನ ಬೆಳಗ್ಗೆ ಫೋನ್ ಮಾಡಿ, ಕೃಷ್ಣ ಜತೆಗೆ ಮೀಟಿಂಗ್ ಇದೆ ಬನ್ನಿ ಎಂದರು. ಕೃಷ ್ಣ ಅವರನ್ನು ಭೇಟಿ ಮಾಡಿ, ಅವರಿಗೂ ಕಥೆ ಹೇಳಿದೆ. ಅವರು ತಕ್ಷಣವೇ ಒಪ್ಪಿದರು. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಫ್ಯಾಮಿಲಿ, ಲವ್ ಎಲ್ಲವೂ ಇರುತ್ತದೆ. ಅಕ್ಟೋಬರ್ 08ರಿಂದ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಮಾನ್ವಿತಾ ಹರೀಶ್ ಅಭಿನಯದ ಚಿತ್ರ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 06ಕ್ಕೆ ಪ್ರಾರಂಭವಾಗಿ ಒಂದೇ ತಿಂಗಳಲ್ಲಿ ಬೆಂಗಳೂರು, ಮಂಡ್ಯ ಮುಂತಾದ ಕಡೆ ಚಿತ್ರೀಕರಣ ಮುಗಿಯಲಿದೆ’ಎಂದು ಮಾಹಿತಿ ಕೊಡುತ್ತಾರೆ ಶೇಖರ್.

ಶಿವತೇಜಸ್ ಚಿತ್ರದಲ್ಲಿ ‘ಡಾರ್ಲಿಂಗ್’: ಇದಲ್ಲದೆ ಇನ್ನೂ ಒಂದು ಹೊಸ ಚಿತ್ರವನ್ನು ಕೃಷ್ಣ ಒಪ್ಪಿಕೊಂಡಿದ್ದು, ಇತ್ತೀಚೆಗಷ್ಟೇ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿದೆ. ‘ಧೈರ್ಯಂ’, ‘ಮಳೆ’ ಮುಂತಾದ ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಶಿವತೇಜಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ‘ಕಾಲಚಕ್ರ’ ನಿರ್ದೇಶಿಸಿರುವ ಸುಮಂತ್ ಕ್ರಾಂತಿ, ರಶ್ಮಿ ಫಿಲಂಸ್ ಬ್ಯಾನರ್ ಮೂಲಕ ಈ ಚಿತ್ರ ನಿರ್ವಿುಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net