ಸೆಮಿಫೈನಲ್ ಹಂತಕ್ಕೆ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ..

Dance Dance
Published on

ಬೆಂಗಳೂರು: ಸ್ಟಾರ್ ಸುವರ್ಣದಲ್ಲಿ ಕಳೆದ ಮೂರು ತಿಂಗಳುಗಳಿಂದ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಡ್ಯಾನ್ಸ್’ ಕಾರ್ಯಕ್ರಮವು ಇದೀಗ ಸೆಮಿಫೈನಲ್ ಹಂತಕ್ಕೆ ತಲುಪಿದೆ. ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ತಮ್ಮ ನೃತ್ಯದಿಂದ ಚಾಲನೆ ನೀಡಿ ಶುಭ ಹಾರೈಸಿದ್ದ ಈ ಕಾರ್ಯಕ್ರಮವು, ತನ್ನ ಹೊಸತನದಿಂದಾಗಿ ಕನ್ನಡಿಗರ ಮನ ಗೆದ್ದು ಯಶಸ್ವಿ ರಿಯಾಲಿಟಿ ಶೋ ಎಂದನಿಸಿಕೊಂಡಿದೆ.

ಶೈನ್ ಶೆಟ್ಟಿ ನಿರೂಪಣೆಯಲ್ಲಿ ಮೂಡಿಬರುತ್ತಿರುವ, ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್, ನಟಿ ಹರಿಪ್ರಿಯಾ, ನೃತ್ಯ ನಿರ್ದೇಶಕ ಎ. ಹರ್ಷ ತೀರ್ಪಗಾರರಾಗಿರುವ ಈ ಕಾರ್ಯಕ್ರಮದ 12 ಜೋಡಿಗಳು ಭಾಗವಹಿಸುತ್ತಿವೆ. ಈ ಜೋಡಿಗಳಲ್ಲಿ ಒಬ್ಬರು ಸಾಮಾನ್ಯ ಪ್ರತಿಭೆಯಾದರೆ, ಇನ್ನೊಬ್ಬರು ಸೆಲೆಬ್ರಿಟಿ. ಈ 12 ಜೋಡಿಗಳಿಗೆ ಹೆಸರಾಂತ ಹಾಗೂ ನುರಿತ ನೃತ್ಯ ನಿರ್ದೇಶಕರು ನೃತ್ಯ ಹೇಳಿಕೊಟ್ಟಿರುವುದು ಈ ಕಾರ್ಯಕ್ರಮದ ವೈಶಿಷ್ಟ್ಯ. ಈ ಡ್ಯಾನ್ಸ್ ಸಮರವು ಇದೀಗ ಸೆಮಿಫೈನಲ್ ಹಂತಕ್ಕೆ ಕಾಲಿಟ್ಟಿದ್ದು, ಏಳು ಜೋಡಿ ಮಾತ್ರ ಉಳಿದುಕೊಂಡಿವೆ. ಅಂತಿಮ ಹಂತಕ್ಕೆ ಐದು ಜೋಡಿಗಳು ತಲುಪಲಿವೆ. ಈ ಕಾರ್ಯಕ್ರಮವು ಇಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net