

ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಆಂಗಲ್ ಏನಾದರೂ ಇತ್ತಾ ಎಂಬುದನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಎಂದು ತನಿಖೆ ನಡೆಯುತ್ತಿದೆ. ಈ ಮಧ್ಯೆ, ರಣವೀರ್ ಸಿಂಗ್, ರಣಬೀರ್ ಕಪೂರ್, ಅಯಾನ್ ಮುಖರ್ಜಿ, ವಿಕ್ಕಿ ಕೌಶಾಲ್ ಸೇರಿದಂತೆ ಹಲವರು ಬಾಲಿವುಡ್ ಸೆಲೆಬ್ರಿಟಿಗಳು ಕೊಕೇನ್ ತೆಗೆದುಕೊಳ್ಳುತ್ತಾರೆ ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಸಿನಿಮಾನೇ ಎಲ್ಲ ಅಲ್ಲ. ಸಮಾಜದ ಒಂದು ಭಾಗ ಅಷ್ಟೇ. ಯಾರೂ ಮಾಡದಿರುವುದನ್ನು ಬಾಲಿವುಡ್ನಲ್ಲಿ ಮಾಡಲಾಗುತ್ತಿಲ್ಲ. ಇಲ್ಲಿ ಬಾಲಿವುಡ್ ಅನ್ನೋದು ಮುಖ್ಯವಲ್ಲ. ಸಮಾಜಕ್ಕೆ ಡ್ರಗ್ಸ್ ಎಂತಹ ಶತ್ರು ಮತ್ತು ಅದರಿಂದ ಏನೆಲ್ಲಾ ಅಪಾಯಗಳಾಗುತ್ತಿವೆ ಎನ್ನುವುದು ಬಹಳ ಮುಖ್ಯ. ಹಾಗಾಗಿ ಡ್ರಗ್ಸ್ ತಡೆಯುವುದಕ್ಕೆ ಏನು ಮಾಡಬೇಕು ಎನ್ನುವುದು ಮುಖ್ಯವೇ ಹೊರತು, ಬಾಲಿವುಡ್ ಕಲಾವಿದರನ್ನು ಟಾರ್ಗೆಟ್ ಮಾಡುವುದಲ್ಲ' ಎಂದು ಹೇಳಿದ್ದಾರೆ.
ಇದೆಲ್ಲದರ ಹಿಂದೆ ಕಂಗನಾ ಅವರ ಹಿತಾಸಕ್ತಿ ಏನು ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿರುವ ಅವರು, 'ಆಕೆ ಒಬ್ಬ ಸ್ಟಾರ್ ನಟಿ. ಸಾಕಷ್ಟು ಸವಾಲುಗಳನ್ನು ಎದುರಿಸಿ ಈ ಹಂತಕ್ಕೆ ಬಂದಿದ್ದಾರೆ. ಆಕೆಯ ಪ್ರಯಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಹಾಗಂತ ಆಕೆ ಪದೇಪದೇ ಯಾಕೆ ಚಿತ್ರರಂಗಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಅವರ ಮಾತುಗಳು ಅಕ್ಷರಶಃ ನಿಜ ಎಂದನಿಸಿದ್ದಿದೆ. ಆದರೆ, ಬಹಳಷ್ಟು ಬಾರಿ ಅವರ ಹೇಳಿಕೆಯ ಹಿಂದೆ ಬೇರೇನೋ ಉದ್ದೇಶಗಳಿವೆ ಎಂದನಿಸುತ್ತದೆ' ಎಂದು ದಲೀಪ್ ಹೇಳಿದ್ದಾರೆ.