ಡಾಲಿ ಪ್ರಕಾರ ಕನ್ನಡ ಪ್ರೀತಿಗೆ ಯಾರು ಒಳ್ಳೆಯ ಉದಾಹರಣೆ ಗೊತ್ತಾ?

Published on
ಬೆಂಗಳೂರು: ನಿರ್ದೇಶಕ ಶಂಕರ್ ಗುರು ಅವರ ಜೀವನ ಕಥೆಯೇ ಒಂದು ಉತ್ತಮ ಚಲನಚಿತ್ರವಾಗಿ ವೀಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಕೊರಿಯರ್ ಹುಡುಗನಾಗಿದ್ದು ಇದೀಗ ನಿರ್ದೇಶಕನಾಗುವವರೆಗೆ, ಶಂಕರ್ ಗುರು ಅವರ ಪ್ರಯಾಣವು ಎಲ್ಲರಿಗೂ ನಿಜಕ್ಕೂ ಸ್ಫೂರ್ತಿ. ಹೌದು, 'ಬಡವ ರಾಸ್ಕಲ್' ಚಿತ್ರ ಶಂಕರ್ ಗುರು ಅವರ ಜೀವನವನ್ನು ಆಧರಿಸಿ ಮಾಡಲಾಗಿರುವ ಚಿತ್ರ. ಸಿನಿಮಾಗೆ ನಾಯಕ, ನಿರ್ಮಾಪಕ ನಟ ಡಾಲಿ ಧನಂಜಯ್ ಆಗಿದ್ದು, ನಾಯಕಿಯಾಗಿ ನಟಿ ಅಮೃತ ಕಾಣಿಸಿಕೊಳ್ಳಲಿದ್ದಾರೆ. 'ಬಡವ ರಾಸ್ಕಲ್' ಚಿತ್ರ ಮಧ್ಯಮ ವರ್ಗದ ಕುಟುಂಬ ಮತ್ತು ಅದರ ಮೌಲ್ಯಗಳ ಕುರಿತಾದ ಚಿತ್ರ ಎಂದು ಈಗಾಗಲೇ ತಿಳಿದುಬಂದಿದೆ.
ಚಿತ್ರದಲ್ಲಿ ನಟ ರಂಗಾಯಣ ರಘು, ನಟಿ ತಾರಾ ಸೇರಿ ಹಲವು ನಟರು ಬೇರೆ ಬೇರೆ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಡಿ.24 ರಂದು 'ಬಡವ ರಾಸ್ಕಲ್' ತೆರೆಗೆ ಅಪ್ಪಳಿಸಲು ರೆಡಿಯಾಗಿದ್ದು, ತಮ್ಮ ಸಿನಿಮಾದ ಒಂದಿಷ್ಟು ಮಾಹಿತಿಯನ್ನು ಚಿತ್ರದ ನಟ ಡಾಲಿ ಧನಂಜಯ್ 'ವಿಜಯವಾಣಿ'ಯೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು, ಚಿತ್ರದ ಟ್ರೈಲರ್​​ನಲ್ಲಿ ಡಾಲಿ ಧನಂಜಯ್ ಅವರು ತಮ್ಮ ಉಡುಪುಗಳ ಮೂಲಕವೂ ಕನ್ನಡ ಪ್ರೀತಿ ಮೇರೆದಿದ್ದಾರೆ. ನಂತರ, ಅವರ ಪ್ರಕಾರ ಕನ್ನಡ ಪ್ರೀತಿ ಎಂದರೆ ಅದಕ್ಕೆ ಉತ್ತಮ ಉದಾಹರಣೆ ಯಾರು ಎಂದು ಸಹ ತಿಳಿಸಿದ್ದಾರೆ. ಹಾಗಾದರೆ, ಯಾರು ಅವರು ಅಂತ ತಿಳಿಯಲು ಮೇಲಿರುವ ವಿಡಿಯೋ ತಪ್ಪದೆ ವೀಕ್ಷಿಸಿ...
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net