PHOTOS| ಇದು ಕೊರೊನಾ ವೈರಸ್​ ಫ್ಯಾಶನ್: ಸರ್ಜಿಕಲ್​ ಮಾಸ್ಕ್​ ಧರಿಸಿ ಕೊರೊನಾ ವಿರುದ್ಧ ದಾಳಿಗಿಳಿದ ಮಾಡೆಲ್ಸ್!​

Corona Virus Fashion
Published on

ವುಹಾನ್​: ಚೀನಾದಲ್ಲಿ ಮೃತ್ಯು ಜಾಲವನ್ನು ನಿರ್ಮಿಸಿರುವ ಮಾರಕ ಕೊರೊನಾ ವೈರಸ್​ ವಿಶ್ವದೆಲ್ಲೆಡೆ ಭಯದ ವಾತಾವರಣವನ್ನು ಸೃಷ್ಟಿಸಿದೆ. ಇದರ ಪರಿಣಾಮ ಎಲ್ಲ ಕ್ಷೇತ್ರದ ಮೇಲೂ ಬೀರಿದೆ. ಆದರೆ, ಕೊರೊನಾಗೆ ಸೆಡ್ಡು ಹೊಡೆದಿರುವ ಮಾಡೆಲ್​ಗಳು ಸರ್ಜಿಕಲ್​ ಮಾಸ್ಕ್​ ಧರಿಸಿ ಕಿಲ್ಲರ್​ ಕೊರೊನಾ ವೈರಸ್​ ವಿರುದ್ಧ ದಾಳಿಗೆ ಇಳಿದಿದ್ದಾರೆ.

ಇದೇನಾಪ್ಪಾ ಕೊರೊನಾ ವಿರುದ್ಧ ದಾಳಿಯೇ ಎಂದು ಹುಬ್ಬೇರಿಸಬೇಡಿ ವಿಶ್ವಾದ್ಯಂತ ಮಾಡೆಲ್​ಗಳು ಸರ್ಜಿಕಲ್​ ಮಾಸ್ಕ್​ ಧರಿಸಿ ಕೊರೊನಾ ವೈರಸ್​ ಫ್ಯಾಶನ್ ಹ್ಯಾಶ್​ಟ್ಯಾಗ್​ ಅಡಿಯಲ್ಲಿ (#CoronaVirusFashion) ವಿವಿಧ ಭಂಗಿಯ ಸೆಕ್ಸಿ ಸೆಲ್ಫಿ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡುತ್ತಿದ್ದಾರೆ.

ಮಾಸ್ಕ್​ ಧರಿಸಿ ತನ್ನ ಪ್ರೇಯಸಿಯೊಂದಿಗೆ ಮಾಡೆಲ್​ ಚುಂಬಿಸುತ್ತಿರುವುದು ಹಾಗೂ ಮಾಸ್ಕ್​ ಧರಿಸಿ ಪ್ರೀತಿಯ ಶ್ವಾನದೊಂದಿಗೆ ಪೋಸ್​ ನೀಡಿರುವುದು ಸೇರಿ ಹಲವಾರು ರೀತಿಯ ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ತಮ್ಮ ಹಿಂಬಾಲಕರನ್ನು ಎಚ್ಚರಿಸುವ ವಿನೂತನ ಪ್ರಯತ್ನವನ್ನು ಮಾಡೆಲ್​ಗಳು ಮಾಡಿದ್ದು, ಮಾಡೆಲ್​ಗಳ ಕೊರೊನಾ ವೈರಸ್​ ಫ್ಯಾಶನ್​ನ ಒಂದಿಷ್ಟು ಫೋಟೋ ಝಲಕ್​ ಇಲ್ಲಿ ಕಾಣಬಹುದಾಗಿದೆ.

ಅಂದಹಾಗೆ ಕೊರೊನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ ಈಗಾಗಲೇ 2000 ದಾಟಿದ್ದು, 73 ಸಾವಿರ ಸೋಂಕು ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net