ಜನರನ್ನು ಬೆಚ್ಚಿಬೀಳಿಸಿರುವ ಕೊರೊನಾ ವೈರಸ್​ ಟೈಟಲ್​ಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ಬೇಡಿಕೆ

corona virus 10 mar 20
Published on

ಬೆಂಗಳೂರು: ವಿಶ್ವ ವ್ಯಾಪಿ ವ್ಯಾಪಿಸಿರುವ ಮಾರಕ ಕೊರೊನಾ ವೈರಸ್​ ಬಗ್ಗೆ ಕನ್ನಡದಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ಕೊರೊನಾ ಎಂದು ಕನ್ನಡ ಹಾಗೂ ಡೆಡ್ಲಿ ಕೊರೊನಾ ಎಂದು ಹಿಂದಿ ಸಿನಿಮಾ ನಿರ್ಮಾಣ ಸಿದ್ಧತೆ ನಡೆಯುತ್ತಿದೆ.
ಕನ್ನಡದ ಕೊರೆನಾ ಹೆಸರಿನ ಚಿತ್ರವನ್ನು ಶಿವಕುಮಾರ್​ ಹಾಗೂ ಉಮೇಶ್​ ಬಣಕರ್​ ನಿರ್ಮಿಸುತ್ತಿದ್ದು, ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಈ ಚಿತ್ರ ವಿಜ್ಞಾನ ಆಧಾರಿತವಾಗಲಿದೆ. ಶಿವಕುಮಾರ್​ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಕೊರೊನಾ ಟೈಟಲ್​ಗೆ ಬೇಡಿಕೆ: ರಾಜ್ಯ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೊರೊನಾ ಟೈಟಲ್​ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಿದವರಿಗೆ ಟೈಟಲ್​ ಸಿಗುತ್ತಿಲ್ಲ. ಬದಲಾಗಿ ಇತರೆ ಹೆಸರುಗಳಲ್ಲಿ ನಿರ್ಮಾಪಕರು ನೋಂದಾಯಿಸಿಕೊಳ್ಳುತ್ತಿದ್ದಾರೆ.

ಪ್ರವೀಣ್​ ನಾಯಕ ಕೂಡ ಕೊರೊನಾ ಹೆಸರಿನ ಟೈಟಲ್​ಗೆ ಅರ್ಜಿ ಸಲ್ಲಿಸಿ ಸಿಗದ ಹಿನ್ನೆಲೆಯಲ್ಲಿ ಅವರು ವೈರಸ್​ ಅಂತ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲೂ ಈಗ ಕೊರೊನಾ ವೈರಸ್​ ಟೈಟಲ್​ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net