ಸ್ಯಾಂಡಲ್​ವುಡ್​ನಲ್ಲಿ ನಿಲ್ಲದ ಕರೊನಾ ಕರಿನೆರಳು! ಮತ್ತೋರ್ವ ನಿರ್ಮಾಪಕ ಕೋವಿಡ್​ಗೆ ಬಲಿ

swati
Published on

ಬೆಂಗಳೂರು: ಕರೊನಾ ಕರಿನೆರಳು ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಂಡಿದೆ. ನಿರ್ಮಾಪಕ ಕೋಟಿ ರಾಮು ಸೇರಿ ಅನೇಕ ಗಣ್ಯರು ಕರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಇದೀಗ ಇನ್ನೋರ್ವ ನಿರ್ಮಾಪಕ ಕರೊನಾಗೆ ಬಲಿಯಾಗಿದ್ದಾರೆ.

ನಿರ್ಮಾಪಕ ಸ್ವಾತಿ ಅಂಬರೀಶ್​ (43) ಕರೊನಾದಿಂದಾಗಿ ಬುಧವಾರ ಸಾವನ್ನಪ್ಪಿದ್ದಾರೆ. ತಾಂಡವ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಅವರು ಕರೊನಾ ಗೆಲ್ಲುವಲ್ಲಿ ವಿಫಲವಾಗಿದ್ದಾರೆ.

ಕರೊನಾಗೆ ಸಿನಿಮಾ ಕ್ಷೇತ್ರದಿಂದ ಬಲಿಯಾದವರು ಇವರೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ಕೋಟಿ ರಾಮು ಸೋಂಕಿಗೆ ಬಲಿಯಾಗಿದ್ದರು. ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅಣ್ಣ ಕೂಡ ಸೋಂಕಿನಿಂದಾಗಿ ಸಾವನ್ನಪ್ಪಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net