More

    ಭಾರತದ ಕರೊನಾ ಸಂಕಷ್ಟಕ್ಕೆ ಮಿಡಿದ ಬಹರೈನ್​; 40 ಮೆಟ್ರಿಕ್‌ ಟನ್‌ ಆಕ್ಸಿಜನ್​ ಪೂರೈಕೆ

    ಮಂಗಳೂರು: ಭಾರತದಲ್ಲಿ ಉಂಟಾಗುತ್ತಿರುವ ಕರೊನಾ ಸಮಸ್ಯೆಯ ಬಗ್ಗೆ ಪೂರ್ತಿ ವಿಶ್ವವೇ ಬೇಸರ ವ್ಯಕ್ತಪಡಿಸಿದೆ. ಅನೇಕ ರಾಷ್ಟ್ರಗಳು ಭಾರತದ ನೆರವಿಗೆ ಮುಂದೆ ಬಂದಿದ್ದು, ಇದೀಗ ಬಹರೈನ್ ಕೂಡ ದೇಶಕ್ಕೆ ಆಕ್ಸಿಜನ್​ ಪೂರೈಕೆ ಮಾಡಿದೆ.

    ಕೋವಿಡ್‌ ಸಂಕಷ್ಟ ಸಮಯದಲ್ಲಿ ಬಹರೈನ್​ ಸಹಾಯಹಸ್ತ ಚಾಚಿದ್ದು 40 ಮೆಟ್ರಿಕ್‌ ಟನ್‌ ಲಿಕ್ವಿಡ್‌ ಆಕ್ಸಿಜನ್‌ ನೆರವು ನೀಡಿದೆ. ಈ 40 ಟನ್‌ ಆಕ್ಸಿಜನ್‌ ಹೇರಿಕೊಂಡು ಭಾರತೀಯ ನೌಕಾಪಡೆಯ ಐಎನ್‌ಎಸ್‌ ತಲ್ವಾರ್‌ ನೌಕೆ ಬುಧವಾರ ಮಧ್ಯಾಹ್ನ ಮಂಗಳೂರು ಬಂದರು ತಲಪಿದೆ.

    20 ಟನ್‌ನ ಎರಡು ಪ್ರತ್ಯೇಕ ಕ್ರಯೋಜೆನಿಕ್‌ ಕಂಟೈನರ್‌ಗಳಲ್ಲಿ ತುಂಬಿರುವ ಆಕ್ಸಿಜನ್‌ನ್ನು ಸದ್ಯ ಇಳಿಸುವ ಕಾರ್ಯ ನಡೆಯುತ್ತಿದೆ. ಉಚಿತವಾಗಿ ಈ ಆಕ್ಸಿಜನ್‌ ನಿರ್ವಹಣೆ ಮಾಡುವಂತೆ ಕೇಂದ್ರ ಸರ್ಕಾರ ಎನ್‌ಎಂಪಿಟಿಗೆ ಸೂಚನೆ ನೀಡಿದೆ.

    ಮರದ ಕೆಳಗೇ ಹಾಸಿಗೆ, ಕೊಂಬೆಗಳಲ್ಲೇ ಸಲೈನ್​ ಬಾಟೆಲ್​! ನಗರಕ್ಕೆ ಬರಲು ಹೆದರಿ ಮರದಡಿ ಮಲಗಿದ ರೋಗಿಗಳು!

    ಬೆಳಗ್ಗೆ ಅಪ್ಪ, ರಾತ್ರಿ ಮಗ.. ಒಂದೇ ದಿನ ಕುಟುಂಬದ ಇಬ್ಬರನ್ನು ಬಲಿ ಪಡೆದ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts