ನಟ ದರ್ಶನ್​ ವಿರುದ್ಧ ದೂರು ದಾಖಲು

Darshan
Published on

ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಕರೊನಾ ಮಾರ್ಗಸೂಚಿಯನ್ನು ಪಾಲಿಸಿಲ್ಲ ಎಂಬ ಆರೋಪದ ಮೇಲೆ ನಟ ದರ್ಶನ್​ ವಿರುದ್ಧ ದೂರು ದಾಖಲಾಗಿದೆ.

ಶುಕ್ರವಾರ ಬೆಳಗ್ಗೆಯಿಂದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ದರ್ಶನ್​ ಇಡೀ ದಿನ ಪ್ರಚಾರ ಮಾಡಿದ್ದರು. ಪ್ರಚಾರದ ವೇಳೆ ಕೋವಿಡ್ ನಿಯಮ ಪಾಲಿಸಿಲ್ಲ ಎಂದು ವಿಪತ್ತು ನಿರ್ವಹಣೆ ಕಾಯ್ದೆಯಡಿ ದೂರು ದಾಖಲಾಗಿದೆ.

ಆರ್​ಆರ್ ನಗರದಲ್ಲಿ ದರ್ಶನ್​ ಪ್ರಚಾರ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಯಾಗುತ್ತಿದ್ದಂತೆ, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ನೋಡಲು ಪ್ರಚಾರ ಕಣಕ್ಕೆ ಬಂದಿದ್ದರು. ದರ್ಶನ್​ ಜತೆಗೆ ನಟಿ ಅಮೂಲ್ಯ ಸಹ ಹಾಜರಾಗಿ ಮತಯಾಚನೆ ಮಾಡಿದ್ದರು. ಈಗ ಮತಯಾಚನೆ ಮಾಡಿದ್ದೇ ದರ್ಶನ್​ಗೆ ಮುಳುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net