ಬೆಳಿಗ್ಗೆ ರಾಮ; ರಾತ್ರಿ ರಾವಣ: ಕಾಮಿಡಿ ಕಿಲಾಡಿಗಳ ಧಮಾಕಾ

Dhamaka
Published on

ಬೆಂಗಳೂರು: ‘ಕಾಮಿಡಿ ಕಿಲಾಡಿಗಳು’ ಮೂಲಕ ಎಲ್ಲರ ಮನರಂಜಿಸಿದ್ದ ಶಿವರಾಜ್ ಕೆ.ಆರ್. ಪೇಟೆ ಮತ್ತು ನಯನಾ, ಈಗ ಹಿರಿತೆರೆಯಲ್ಲೂ ಜತೆಯಾಗಿದ್ದಾರೆ. ಇಬ್ಬರೂ ‘ಧಮಾಕಾ’ ಎಂಬ ಚಿತ್ರದಲ್ಲಿ ಗಂಡ-ಹೆಂಡತಿಯಾಗಿ ನಟಿಸಿದ್ದು, ಆ ಚಿತ್ರ ಸೆ. 02ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ಬಿಡಗುಡೆಯಾಗಿದೆ.

ಇದೊಂದು ಪ್ರತಿ ಮಧ್ಯಮ ವರ್ಗದ ಕುಟುಂಬದಲ್ಲೂ ಪ್ರತಿ ದಿನ ನಡೆಯುವ ಕಥೆ ಎನ್ನುವ ನಿರ್ದೇಶಕ ಲಕ್ಷ್ಮೀ ರಮೇಶ್, ‘ಮಧ್ಯಮ ವರ್ಗದ ಕುಟುಂಬದಲ್ಲಿ ಗಲಾಟೆ, ಪ್ರೀತಿ, ಕಾಳಜಿ ಎಲ್ಲವೂ ಇರುತ್ತದೆ. ಇವೆಲ್ಲವನ್ನೂ ತಮಾಷೆಯಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಟ್ರೇಲರ್​ನಲ್ಲಿ ಹೇಳಿರುವಂತೆಯೇ, ನಾಯಕ ಬೆಳಿಗ್ಗೆ ಹೆಂಡತಿಗೆ ಹೆದರುತ್ತಿರುತ್ತಾನೆ, ರಾತ್ರಿ ರಾವಣನ ತರಹ ಆಡುತ್ತಿರುತ್ತಾನೆ. ಯಾಕೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಯಾವುದೇ ಡಬ್ಬಲ್ ಮೀನಿಂಗ್ ಸಂಭಾಷಣೆ ಇಲ್ಲ. ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರ’ ಎನ್ನುತ್ತಾರೆ ಅವರು.

‘ಧಮಾಕಾ’ದಲ್ಲಿ ಶಿವರಾಜ್ ಮತ್ತು ನಯನಾ ಜತೆಗೆ ಮೋಹನ್ ಜುನೇಜ, ಕೋಟೆ ಪ್ರಭಾಕರ್, ಮಹಾಂತೇಶ್ ಹಿರೇಮಠ್, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನ ಸುನೀಲ್ ಎಸ್. ರಾಜ್ ಮತ್ತು ಅನ್ನಪೂರ್ಣ ಪಾಟೀಲ್ ನಿರ್ವಿುಸಿದ್ದು, ಹಾಲೇಶ್ ಛಾಯಾಗ್ರಹಣ, ವಿಕಾಸ್ ವಸಿಷ್ಠ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net