ಕಮ್ ಬ್ಯಾಕ್​ ರಶ್ಮಿಕಾ

rasmikan dec 28
Published on

ಬೆಂಗಳೂರು: ‘ಕಿರಿಕ್ ಹುಡುಗಿ’ ಎಂದೇ ಹೆಸರಾಗಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗಿರುವುದು ಹೊಸದೇನಲ್ಲ. ಇದೀಗ ಮತ್ತೊಮ್ಮೆ ಅವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಹಾಗಂತ ಇದು ಅವರನ್ನು ಟ್ರೋಲ್ ಮಾಡಿ ನಡೆದ ವಿದ್ಯಮಾನವಲ್ಲ, ಬದಲಿಗೆ ಅವರ ಟ್ವೀಟ್​ಗೆ ನಡೆದ ಅಭಿಯಾನ.

ಹೌದು.. ರಶ್ಮಿಕಾ ಅಭಿಮಾನಿಗಳು ಈ ವಾರಾಂತ್ಯದಲ್ಲಿ ್ಪಟಞಛಿಆಚ್ಚkಚಠಜಞಜಿkಚ ಹ್ಯಾಷ್​ಟ್ಯಾಗ್​ನಡಿ ಅಭಿಯಾನ ನಡೆಸಿದ್ದಾರೆ. ಕನಿಷ್ಠ 2-3 ದಿನಗಳಿಗೊಮ್ಮೆ ಒಂದಾದರೂ ಟ್ವೀಟ್ ಮಾಡುತ್ತಿದ್ದ ರಶ್ಮಿಕಾ, ಕಳೆದೊಂದು ವಾರದಿಂದ ಒಂದೂ ಟ್ವೀಟ್ ಮಾಡದಿರುವುದೇ ಇಷ್ಟಕ್ಕೆಲ್ಲ ಕಾರಣ. ಮಾ.7ರಂದು ಕೊನೆಯದಾಗಿ ಟ್ವೀಟ್ ಮಾಡಿದ್ದ ಅವರು ಬಳಿಕ ಟ್ವಿಟರ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರಿಂದ ಬೇಸರಗೊಂಡಿರುವ ಅಭಿಮಾನಿಗಳು ಸರಣಿ ಟ್ವೀಟ್ ಮಾಡಿ ರಶ್ಮಿಕಾ ಟ್ವೀಟ್​ಗಾಗಿ ಆಗ್ರಹ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಇದಕ್ಕೆ ರಶ್ಮಿಕಾ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬ ಕುತೂಹಲದಲ್ಲಿದ್ದಾರಂತೆ ಅಭಿಮಾನಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net