More

    ದಾರಿ ಬದಿಗೆ ಕಾರು ನಿಲ್ಲಿಸಿ ಮೂತ್ರವಿಸರ್ಜನೆಗೆ ಹೋದವ ವಾಪಸ್​ ಬಂದು ನೋಡಿದಾಗ ಎದುರಾದ ಶಾಕ್​ಗೆ ಕುಡಿದಿದ್ದ ಅಮಲೂ ಇಳಿಯಿತು…

    ನೊಯ್ಡಾ: ಆತ ಪಾರ್ಟಿಯೊಂದರಲ್ಲಿ ಪಾಲ್ಗೊಂಡು ವಾಪಸ್​ ಮನೆಗೆ ತೆರಳುತ್ತಿದ್ದ. ಬಿಎಂಡಬ್ಲ್ಯೂ ಕಾರನ್ನು ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದವನಿಗೆ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆ ಹೋಗಬೇಕಾಯಿತು. ಅದೆಷ್ಟು ಅರ್ಜೆಂಟ್​ ಆಗಿತ್ತೋ..ಏನೋ…ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಅಲ್ಲೇ ಸ್ವಲ್ಪ ಮುಂದೆ ಹೋದ…ಆದರೆ ವಾಪಸ್​ ಬಂದಾಗ ಮಾತ್ರ ಅವನಿಗೆ ದೊಡ್ಡ ಶಾಕ್​ ಕಾದಿತ್ತು…!

    ನೊಯ್ಡಾದ ರಿಶಬ್​ ಅರೋರಾ ಎಂಬಾತ ಸ್ಟಾಕ್​ ದಲ್ಲಾಳಿ. ಪಾರ್ಟಿಗೆಂದು ತನ್ನ ಹತ್ತಿರದ ಸಂಬಂಧಿಯ ಹೊಸ ಬಿಎಂಡಬ್ಲ್ಯೂ ಐಷಾರಾಮಿ ಕಾರನ್ನು ತೆಗೆದುಕೊಂಡು ಹೋಗಿದ್ದ. ಈ ಕಾರಿನ ಬೆಲೆ ಬರೋಬ್ಬರಿ 40 ಲಕ್ಷ ರೂ. ಪಾರ್ಟಿಗೆ ಹೋದ ರಿಶಬ್​ ಮದ್ಯಪಾನ ಮಾಡಿದ. ಅರ್ಧಂಬರ್ಧ ಅಮಲಿನ ಸ್ಥಿತಿಯಲ್ಲಿ ಮನೆಗೆ ಹೊರಟವನಿಗೆ ಮಾರ್ಗಮಧ್ಯದಲ್ಲಿ ಮೂತ್ರ ವಿಸರ್ಜನೆಗೆ ಹೋಗಬೇಕಾಯಿತು. ಕಾರನ್ನು ನಿಲ್ಲಿಸಿ, ಕೀಯನ್ನು ಅದರಲ್ಲೇ ಬಿಟ್ಟು ರಸ್ತೆಗಿಂತ ಸ್ವಲ್ಪ ಮುಂದೆ ಹೋದ. ಆದರೆ ಆತ ವಾಪಸ್​ ಬಂದಾಗ ಕಾರು ಇರಲಿಲ್ಲ. ಅಪರಿಚಿತರ ಗುಂಪೊಂದು ಕಾರನ್ನು ಕದ್ದೊಯ್ದಾಗಿತ್ತು. ಮದ್ಯದ ಅಮಲು ಇಳಿಯುವಷ್ಟು ಆತ ಶಾಕ್​ಗೆ ಒಳಗಾಗಿದ್ದ. !

    ರಿಶಬ್​ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕದ್ದವರಿಗಾಗಿ ಹುಡುಕುತ್ತಿದ್ದಾರೆ. ಕಾರಿನ ಮಾಲೀಕನ ಬಗ್ಗೆ ಗೊತ್ತಿರುವವರೇ ಯಾರೋ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಅಪರಿಚಿತ ಕಳ್ಳರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದುಷ್ಕರ್ಮಿಗಳನ್ನು ಆದಷ್ಟು ಶೀಘ್ರವೇ ಪತ್ತೆಹಚ್ಚುವುದಾಗಿ ತಿಳಿಸಿದ್ದಾರೆ.

    ಅಷ್ಟಕ್ಕೂ ಈ ಕಾರಿಗಾಗಿ ಮಾಡಿದ 40 ಲಕ್ಷ ರೂ.ಸಾಲ ಇನ್ನೂ ಹಾಗೇ ಇದೆ. ರಿಶಬ್​ ಅರೋರಾ ವಿರುದ್ಧ ಡ್ರಂಕ್​ ಆ್ಯಂಡ್ ಡ್ರೈವ್​ ಪ್ರಕರಣವೂ ದಾಖಲಾಗಿದೆ. (ಏಜೆನ್ಸೀಸ್​)

    ಸಾರ್ಕ್​ ರಾಷ್ಟ್ರಗಳ ನಾಯಕರ ವಿಡಿಯೋ ಕಾನ್ಫರೆನ್ಸ್​; Covid19 ತುರ್ತು ನಿಧಿ ಸ್ಥಾಪನೆಯ ಪ್ರಸ್ತಾವನೆಯನ್ನಿಟ್ಟ ಪ್ರಧಾನಿ ನರೇಂದ್ರ ಮೋದಿ..

    ಸಂಸ್ಕಾರಹೀನ ಅಹಂಕಾರಕ್ಕೆ ಸಿಟ್ಟು ಕೂಡ ಬಂದುಬಿಟ್ಟರೆ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts