ಅಂದಹಾಗೆ, ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬಿಜಿಯಾಗಿರುವ ಮೀನಾ ಅವರಿಗೆ ಆಗಾಗ ಒಂದು ವಿಚಾರ ಕಾಡುತ್ತಲೇ ಇರುತ್ತದೆ. ಅದೇನೆಂದರೆ, ಎರಡನೇ ಮದುವೆ ಕುರಿತಾದ ವದಂತಿಗಳು ಹೆಚ್ಚಾಗಿ ಹರಡುತ್ತಲೇ ಇರುತ್ತವೆ. ಹಿಂದೊಮ್ಮೆ ನಟ ಧನುಷ್ ಜತೆ ಮೀನಾ ಅವರ ಹೆಸರು ಕೇಳಿಬಂದಿತ್ತು. ಹಲವು ಯೂಟ್ಯೂಬ್ ಚಾನೆಲ್ಗಳಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿತ್ತು. ಆದರೆ, ಇದುವರೆಗೂ ಮೀನಾ ಮಾತ್ರ ಎಲ್ಲಿಯೂ ಸ್ಪಷ್ಟನೆ ನೀಡುವ ಗೋಜಿಗೆ ಹೋಗಲಿಲ್ಲ. ಆದರೆ, ಮೊದಲ ಬಾರಿಗೆ ಎರಡನೇ ಮದುವೆ ಬಗ್ಗೆ ಮೀನಾ ಮೌನ ಮುರಿದಿದ್ದಾರೆ.