ಬಾಲ್ಯದಿಂದಲೂ ಐಪಿಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದ ತೃಪ್ತಿ ಭಟ್, ತನಗೆ ಸಿಕ್ಕ ಎಲ್ಲಾ ಒಳ್ಳೆಯ ಕೆಲಸಗಳನ್ನು ತ್ಯಜಿಸಿದರು. ತನ್ನ ಗುರಿಗೆ ಅನುಗುಣವಾಗಿ, ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸಾಗಿ ಐಪಿಎಸ್ ಅಧಿಕಾರಿಯಾದರು. ಅವರು ಒಟ್ಟು 16 ಸರ್ಕಾರಿ ಉದ್ಯೋಗಗಳನ್ನು ಪಡೆದರು. ಆದರೆ, ಅಂತಿಮವಾಗಿ ಐಪಿಎಸ್ ಅಧಿಕಾರಿಯಾಗಿ ತಮ್ಮ ಗುರಿ ಸಾಧಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಕೆಲಸ ಸಿಗುವುದೆಂದರೆ ಸಾಮಾನ್ಯ ಸಂಗತಿಯಲ್ಲ ಆದರೆ, ತೃಪ್ತಿ ಆ ಅವಕಾಶವನ್ನು ಕೂಡ ತ್ಯಜಿಸಿದರು.