ಸಾಕಷ್ಟು ಹಾರ್ಡ್ವರ್ಕ್ ಜೊತೆಗೆ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಕಂಡಿದ್ದ ನಟ ವಿಜಯ್ ಅವರು, ಎರಡು ವರ್ಷದ ಹಿಂದೆ ತಮಿಳಿಗ ವೆಟ್ರಿ ಕಳಗಂ ಪಕ್ಷ ಕಟ್ಟಿ, ಮೊದಲ ಬಾರಿ ಚುನಾವಣೆಯನ್ನು ಎದುರಿಸಿ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಮೇ.10ರಂದು ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಾತ್ರ ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಅಷ್ಟೇ ಅಲ್ಲದೆ, ಕಾರ್ಯಕ್ರಮಕ್ಕೆ ತ್ರಿಷಾ ಎಂಟ್ರಿ ಕೊಟ್ಟ ರೀತಿಯೂ ಸೋಶಿಯಲ್ ಮೀಡಿಯಾದಲ್ಲಿ ನಾನಾ ವಿಧದಲ್ಲಿ ಚರ್ಚೆಗೆ ಮುನ್ನುಡಿ ಬರೆಯುತ್ತಿದೆ. ಅವರ ಡ್ರೆಸ್ಸಿಂಗ್ ಸೆನ್ಸ್, ನೆಕ್ಲೇಸ್, ಜಡೆ, ಸೀರೆ, ಅತ್ತಿದ್ದು, ನಕ್ಕಿದ್ದು ಎಲ್ಲವೂ ಮಾತಿಗಿಳಿಯುವಂತೆ ಮಾಡಿದೆ.