ಅಂದಹಾಗೆ, ತಮಿಳು ಚಿತ್ರರಂಗದಲ್ಲಿ ನಟ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್ ಅವರ ಜೋಡಿ ಕಳೆದ ಎರಡುವರೆ ದಶಕಗಳಿಂದ ಅತ್ಯಂತ ಜನಪ್ರಿಯ ಜೋಡಿಯಾಗಿ ಹೊರಹೊಮ್ಮಿದೆ. ಇವರಿಬ್ಬರ ಯಶಸ್ವಿ ಕಾಂಬಿನೇಷನ್ ಆರಂಭವಾಗಿದ್ದು 2004ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ 'ಗಿಲ್ಲಿ' (Ghilli) ಮೂಲಕ. ಆ ಬಳಿಕ ತೆರೆಕಂಡ 'ತಿರುಪಾಚಿ', 'ಆದಿ', 'ಕುರುವಿ' ಮತ್ತು ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ 'ಲಿಯೋ' ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಜೋಡಿ ಜೊತೆಯಾಗಿ ನಟಿಸುವ ಮೂಲಕ ಪ್ರೇಕ್ಷಕರ ಸಾರ್ವಕಾಲಿಕ ನೆಚ್ಚಿನ ಆನ್‌ಸ್ಕ್ರೀನ್ ಜೋಡಿಯಾಗಿ ಅಭಿಮಾನಿಗಳ ಹೃದಯ ಗೆದ್ದಿದೆ, (ಏಜೆನ್ಸೀಸ್).