ವಿ ಬೇಡ ಎಸ್​ ಇರಲಿ... ತಮ್ಮ ತಂದೆ ವಿಜಯ್​ಗೆ ಮತ್ತೊಂದು ಶಾಕ್​ ನೀಡಿದ ಪುತ್ರ ಜೇಸನ್​ ಸಂಜಯ್...! Actor Vijay ​

ವಿ ಬೇಡ ಎಸ್​ ಇರಲಿ... ತಮ್ಮ ತಂದೆ ವಿಜಯ್​ಗೆ ಮತ್ತೊಂದು ಶಾಕ್​ ನೀಡಿದ ಪುತ್ರ ಜೇಸನ್​ ಸಂಜಯ್...! Actor Vijay ​
ವಿ ಬೇಡ ಎಸ್​ ಇರಲಿ... ತಮ್ಮ ತಂದೆ ವಿಜಯ್​ಗೆ ಮತ್ತೊಂದು ಶಾಕ್​ ನೀಡಿದ ಪುತ್ರ ಜೇಸನ್​ ಸಂಜಯ್...! Actor Vijay ​
Published on

ಪ್ರಮುಖ ಮುಖ್ಯಾಂಶಗಳು

  • ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಎಲ್ಲರಿಗೂ ಗೊತ್ತಿದೆ
  • ವಿಜಯ್​ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ
  • ಡಿವೋರ್ಸ್​ ವಿಚಾರದಲ್ಲಿ ವಿಜಯ್​ ಪುತ್ರ ಜೇಸನ್​ ಸಂಜಯ್, ತಮ್ಮ ತಾಯಿಯ ಪರವಾಗಿ ನಿಂತಿದ್ದಾರೆ
  • ಜೇಸನ್​ ಸಂಜಯ್​ ಅವರು ತಮ್ಮ ಹೆಸರಿನ ಮುಂದೆ ಇದ್ದ ಅಪ್ಪನ ಮೊದಲ ಅಕ್ಷರವನ್ನು ತೆಗೆಸಿದ್ದಾರೆ
Actor Vijay : ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ವಿಜಯ್​ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಕಳೆದ ಎರಡು ವಾರಗಳಿಂದ ಭಾರಿ ಚರ್ಚೆಯಲ್ಲಿದೆ. ಈ ಒಂದು ಸುದ್ದಿ ತಮಿಳುನಾಡು ರಾಜಕೀಯ ಹಾಗೂ ಸಿನಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಏಪ್ರಿಲ್​ 20ರಂದು ಡಿವೋರ್ಸ್​ ಸಂಬಂಧ ವಿಚಾರಣೆ ನಡೆಯಲಿದೆ. ಇದರ ನಡುವೆ ದಿನಕ್ಕೊಂದು ಹೊಸ ಹೊಸ ಸುದ್ದಿ ಹೊರ ಬರುತ್ತಲೇ ಇದೆ.
ಡಿವೋರ್ಸ್​ ವಿಚಾರದಲ್ಲಿ ವಿಜಯ್​ ಪುತ್ರ ಜೇಸನ್​ ಸಂಜಯ್, ತಮ್ಮ ತಾಯಿಯ ಪರವಾಗಿ ನಿಂತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿಬರುತ್ತಿದೆ. ತಮ್ಮ ತಂದೆಯ ನಡೆಯ ಬಗ್ಗೆ ಅಸಮಧಾನಗೊಂಡಿರುವ ಸಂಜಯ್​, ಇನ್​ಸ್ಟಾಗ್ರಾಂನಿಂದ ಅವರನ್ನು ಅನ್​ಫಾಲೋ ಮಾಡಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ತಾಜಾ ಸಂಗತಿ ಏನೆಂದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೇಸನ್​ ಸಂಜಯ್​, ತಮ್ಮ ಹೆಸರಿನ ಮುಂದೆ ಇದ್ದ ಅಪ್ಪನ ಮೊದಲ ಅಕ್ಷರವನ್ನು ತೆಗೆಸಿರುವುದಾಗಿ ಇದೀಗ ಸುದ್ದಿಯಾಗಿದೆ.
ಹೌದು, ಜೇಸನ್ ಸಂಜಯ್ ತಮ್ಮ ಉಪನಾಮದಿಂದ ವಿಜಯ್ ಹೆಸರನ್ನು ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ. ಇದುವರೆಗೆ ತಮ್ಮ ಹೆಸರನ್ನು ಜೇಸನ್ ಸಂಜಯ್ ವಿ ಎಂದು ಬಳಸುತ್ತಿದ್ದರು. ಆದರೆ, ಈಗ ಜೇಸನ್ ಸಂಜಯ್ ಎಸ್ ಎಂದು ಬದಲಾಯಿಸಿದ್ದಾರೆ ಎಂದು ವರದಿಯಾಗಿದೆ. ತಮ್ಮ ತಂದೆ ವಿಜಯ್ ಹೆಸರಿನಲ್ಲಿರುವ ಮೊದಲ ವಿ ಅಕ್ಷರದ ಬದಲಾಗಿ ಎಸ್ ಅಕ್ಷರವನ್ನು ಜೇಸನ್​ ಸಂಜಯ್​ ಬದಲಾಯಿಸಿದ್ದು, ಅದು ಅವರ ತಾಯಿ ಸಂಗೀತಾ ಹೆಸರನ್ನು ಸೂಚಿಸುತ್ತದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. 
ತಂದೆ ವಿಜಯ್​ ನಡೆಯಿಂದ ಅಸಮಾಧಾನಗೊಂಡಿರುವ ಜೇಸನ್​ ಸಂಜಯ್, ತಾಯಿಯ ಪರವಾಗಿ ನಿಂತಿದ್ದಾರೆ ಎಂಬ ವರದಿಯಿದೆ. ಸಂಜಯ್​ ಅವರು ನಿರ್ದೇಶಕರಾಗಿ ಈಗಷ್ಟೇ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ 4 ಲಕ್ಕಕ್ಕೂ ಅಧಿಕ ಫಾಲೋವರ್ಸ್​ ಹೊಂದಿರುವ ಸಂಜಯ್​, ಕೇವಲ 36 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅವರಲ್ಲಿ ನಟರಾದ ವಿಜಯ್​ ಸೇತುಪತಿ ಹಾಗೂ ಸಂದೀಪ್​ ಕೃಷ್ಣನ್​ ಕೂಡ ಒಬ್ಬರು. ಆದರೆ, ತಮ್ಮ ತಂದೆಯನ್ನು ಫಾಲೋ ಮಾಡುತ್ತಿಲ್ಲ. ಹೀಗಾಗಿ ನಾನಾ ಊಹಾಪೋಹಗಳು ಹರಿದಾಡುತ್ತಿವೆ.​

ಡಿವೋರ್ಸ್​ ಅರ್ಜಿಯಲ್ಲಿ ಏನಿದೆ?

ವಿಜಯ್ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಡಿವೋರ್ಸ್​ ಪಡೆಯಲು ಕಾರಣ ಏನು ಅನ್ನೋದನ್ನು ತಿಳಿಸಿದ್ದಾರೆ. ವಿಜಯ್,​ ಆಕೆ (ಹೆಸರು ಉಲ್ಲೇಖಿಸಿಲ್ಲ) ಜೊತೆ ಅನೈತಿಕ ಸಂಬಂಧ ಹೊಂದಿರುವ ವಿಷಯ ನನಗೆ ಹಾಗೂ ನನ್ನ ಮಕ್ಕಳಿಗೆ ತೀರ ಘಾಸಿ ಮಾಡಿದೆ. ಇದು ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ, ಅವರಿಬ್ಬರು ಫಾರಿನ್​ ಟ್ರಿಪ್​ಗಳಿಗೆ ಹೋದ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಾಕಿಕೊಂಡಿರುವುದು ತುಂಬ ನೋವುಂಟು ಮಾಡಿದೆ ಎಂದು ಉಲ್ಲೇಖಿಸಿದ್ದಾರೆ. 
ಇದರ ನಡುವೆ ನಟಿ ತ್ರಿಷಾ ಹೆಸರು ವಿಜಯ್​ ಜೊತೆ ತಳುಕು ಹಾಕಿಕೊಂಡಿದೆ. ಅಂದಹಾಗೆ, ವಿಜಯ್​ ಮತ್ತು ತ್ರಿಷಾ ನಡುವೆ ಲವ್​ ಅಫೇರ್​ ಇದೆ ಅನ್ನೋ ಚರ್ಚೆ ಇಂದಿನದ್ದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ನಡೆಯುತ್ತಾ ಬರುತ್ತಿದೆ. ಯಾವಾಗ ವಿಜಯ್​ ಅವರು ರಾಜಕೀಯಕ್ಕೆ ಇಳಿದರೋ ಈ ಚರ್ಚೆ ಜೋರಾಗ ತೊಡಗಿದೆ. ತಮಿಳುನಾಡಿನ ಕೆಲ ರಾಜಕೀಯ ನಾಯಕರು ಬಹಿರಂಗವಾಗಿಯೇ ವಿಜಯ್​ ಮತ್ತು ತ್ರಿಷಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಈ ಹಿಂದೆ ತ್ರಿಷಾ, ವಿಜಯ್​ ಅವರ ಹುಟ್ಟುಹಬ್ಬದ ಸಮಯದಲ್ಲಿ 'ಹ್ಯಾಪಿ ಬರ್ತ್ಡೇ ಟು ದಿ ಬೆಸ್ಟ್' ಎಂದು ಶೀರ್ಷಿಕೆ ನೀಡಿ, ವಿಜಯ್ ತಮ್ಮ ಪಕ್ಕದಲ್ಲಿ ಕುಳಿತು ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಫೋಟೋ ನೋಡಿದರೆ ವಿಜಯ್ ಅವರು ತ್ರಿಷಾ ಮನೆಯಲ್ಲಿ ಇರುವಂತೆ ಕಾಣುತ್ತಿತ್ತು. ಆಗಲೂ ವಿಜಯ್​-ತ್ರಿಷಾ ಸಂಬಂಧ ಚರ್ಚೆಯಾಗಿತ್ತು. ಅಲ್ಲದೆ, ಈ ಹಿಂದೆ, ಕೀರ್ತಿ ಸುರೇಶ್ ಅವರ ಮದುವೆಗೆ ವಿಜಯ್​ ಮತ್ತು ತ್ರಿಷಾ ಪ್ರೈವೆಟ್​ ಜೆಟ್​ನಲ್ಲಿ ತೆರಳಿದ್ದರು. ಈ ವೇಳೆಯೂ ಭಾರಿ ಸುದ್ದಿಯಾಗಿತ್ತು. ಇದೀಗ ಡಿವೋರ್ಸ್​ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮತ್ತೊಮ್ಮೆ ತ್ರಿಷಾ ಹೆಸರು ಜೋರಾಗಿ ಸದ್ದು ಮಾಡುತ್ತಿದೆ. 
ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಟ ವಿಜಯ್​ ಅವರು ಚುನಾವಣಾ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಪತ್ನಿ ಸಂಗೀತಾ ಡಿವೋರ್ಟ್​ ಅರ್ಜಿ ಸಲ್ಲಿಸಿದ್ದಾರೆ. ಫೆಬ್ರವರಿ 24 ರಂದು ಸಲ್ಲಿಸಲಾದ ಡಿವೋರ್ಸ್​ ಅರ್ಜಿಯು ಏಪ್ರಿಲ್ 20 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಪ್ರಕರಣದ ವಿಚಾರಣೆಗೆ ವಿಜಯ್ ಖುದ್ದಾಗಿ ಹಾಜರಾಗಬೇಕೆಂದು ಚೆಂಗಲ್ಪಟ್ಟು ನ್ಯಾಯಾಲಯ ಆದೇಶಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net