ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ನಾನು ನಿನ್ನ ಬಿಟ್ಟು ಕೊಡಲ್ಲ... ಡಿವೋರ್ಸ್​ ಕೇಸ್​ ಮಧ್ಯೆಯೇ ತ್ರಿಷಾ ಪೋಸ್ಟ್​ ವೈರಲ್! Vijay Divorce ​

ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ನಾನು ನಿನ್ನ ಬಿಟ್ಟು ಕೊಡಲ್ಲ... ಡಿವೋರ್ಸ್​ ಕೇಸ್​ ಮಧ್ಯೆಯೇ ತ್ರಿಷಾ ಪೋಸ್ಟ್​ ವೈರಲ್! Vijay Divorce ​
ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ನಾನು ನಿನ್ನ ಬಿಟ್ಟು ಕೊಡಲ್ಲ... ಡಿವೋರ್ಸ್​ ಕೇಸ್​ ಮಧ್ಯೆಯೇ ತ್ರಿಷಾ ಪೋಸ್ಟ್​ ವೈರಲ್! Vijay Divorce ​
Published on

ಪ್ರಮುಖ ಮುಖ್ಯಾಂಶಗಳು

  • ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ನಟ ವಿಜಯ್​ ದಾಂಪತ್ಯದಲ್ಲಿ ಬಿರುಕು ಮೂಡಿದೆ
  • ವಿಜಯ್​ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ
  • ವಿಜಯ್​ ಡಿವೋರ್ಸ್​ ಸುದ್ದಿಯ ಬೆನ್ನಲ್ಲೇ ನಟಿ ತ್ರಿಷಾ ಹೆಸರು ಸಹ ಭಾರಿ ಚರ್ಚೆಯಾಗುತ್ತಿದೆ
  • ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮತ್ತೊಂದು ಪೋಸ್ಟ್​ ಭಾರಿ ಸಂಚಲನ ಮೂಡಿಸಿದೆ
Vijay Divorce : ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್ ಹಾಗೂ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಸೃಷ್ಟಿಸುತ್ತಿದೆ. ಇದರ ನಡುವೆ ನಟಿ ತ್ರಿಷಾ ಅವರ ಎಲ್ಲಾ ಪೋಸ್ಟ್‌ಗಳು ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ.
ವಿಜಯ್​ ಅವರ ಪತ್ನಿ ಸಂಗೀತಾ ಅವರು ಚೆನ್ನೈನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ಏಪ್ರಿಲ್​ 20 ರಂದು ಡಿವೋರ್ಸ್​ ಅರ್ಜಿ ವಿಚಾರಣೆ ನಡೆಯಲಿದ್ದು, ಖುದ್ದು ವಿಜಯ್​ ಹಾಜರಿರಬೇಕೆಂದು ಕೋರ್ಟ್​ ಆದೇಶ ಮಾಡಿರುವುದಾಗಿ ಕೆಲವು ದಿನಗಳ ಹಿಂದಷ್ಟೇ ವರದಿಯಾಗಿದೆ. ನಟಿಯೊಂದಿಗಿನ ವಿವಾಹೇತರ ಸಂಬಂಧವನ್ನು ಉಲ್ಲೇಖಿಸಿ ಸಂಗೀತಾ ಅವರು ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬ ಮಾತಿದೆ. ಈ ಒಂದು ಸುದ್ದಿ ವಿಜಯ್​ ಅಭಿಮಾನಿಗಳಲ್ಲಿ ಭಾರಿ ಬೇಸರ ಉಂಟುಮಾಡಿದೆ.
ವಿಜಯ್​ ವಿವಾಹೇತರ ಸಂಬಂಧ ಚರ್ಚೆಯಾಗುತ್ತಿದ್ದಂತೆ ನಟಿ ತ್ರಿಷಾ ಹೆಸರು ಮುನ್ನಲೆಗೆ ಬಂದಿದೆ. ಅಂದಹಾಗೆ, ವಿಜಯ್​ ಮತ್ತು ತ್ರಿಷಾ ನಡುವೆ ಲವ್​ ಅಫೇರ್​ ಇದೆ ಅನ್ನೋ ಚರ್ಚೆ ಇಂದಿನದ್ದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ನಡೆಯುತ್ತಾ ಬರುತ್ತಿದೆ. ಯಾವಾಗ ವಿಜಯ್​ ಅವರು ರಾಜಕೀಯಕ್ಕೆ ಇಳಿದರೋ ಈ ಚರ್ಚೆ ಜೋರಾಗ ತೊಡಗಿದೆ. ತಮಿಳುನಾಡಿನ ಕೆಲ ರಾಜಕೀಯ ನಾಯಕರು ಬಹಿರಂಗವಾಗಿಯೇ ವಿಜಯ್​ ಮತ್ತು ತ್ರಿಷಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಈ ಹಿಂದೆ ತ್ರಿಷಾ, ವಿಜಯ್​ ಅವರ ಹುಟ್ಟುಹಬ್ಬದ ಸಮಯದಲ್ಲಿ 'ಹ್ಯಾಪಿ ಬರ್ತ್ಡೇ ಟು ದಿ ಬೆಸ್ಟ್' ಎಂದು ಶೀರ್ಷಿಕೆ ನೀಡಿ, ವಿಜಯ್ ತಮ್ಮ ಪಕ್ಕದಲ್ಲಿ ಕುಳಿತು ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಫೋಟೋ ನೋಡಿದರೆ ವಿಜಯ್ ಅವರು ತ್ರಿಷಾ ಮನೆಯಲ್ಲಿ ಇರುವಂತೆ ಕಾಣುತ್ತಿತ್ತು. ಆಗಲೂ ವಿಜಯ್​-ತ್ರಿಷಾ ಸಂಬಂಧ ಚರ್ಚೆಯಾಗಿತ್ತು. ಅಲ್ಲದೆ, ಈ ಹಿಂದೆ, ಕೀರ್ತಿ ಸುರೇಶ್ ಅವರ ಮದುವೆಗೆ ವಿಜಯ್​ ಮತ್ತು ತ್ರಿಷಾ ಪ್ರೈವೆಟ್​ ಜೆಟ್​ನಲ್ಲಿ ತೆರಳಿದ್ದರು. ಈ ವೇಳೆಯೂ ಭಾರಿ ಸುದ್ದಿಯಾಗಿತ್ತು. ಇದೀಗ ಡಿವೋರ್ಸ್​ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮತ್ತೊಮ್ಮೆ ತ್ರಿಷಾ ಹೆಸರು ಜೋರಾಗಿ ಸದ್ದು ಮಾಡುತ್ತಿದೆ.
ತ್ರಿಷಾ ಅವರು ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಟಿ. ವಯಸ್ಸು 40 ದಾಟಿದರು ಕೂಡ ಇಂದಿಗೂ ಸ್ಟಾರ್​ ನಾಯಕಿಯ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ತೆರೆಯ ಮೇಲೆ ವಿಜಯ್ ಮತ್ತು ತ್ರಿಷಾ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್​ ಆಗಿದೆ. ಕಳೆದ 20 ವರ್ಷಗಳಲ್ಲಿ ಅವರಿಬ್ಬರು 5 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವುಗಳಲ್ಲಿ, ಗಿಲ್ಲಿ, ತಿರುಪಚ್ಚಿ ಮತ್ತು ಲಿಯೋ ಸಿನಿಮಾಗಳು ಬ್ಲಾಕ್​ಬಸ್ಟರ್​ ಹಿಟ್ ಆಗಿವೆ. ವಿಜಯ್​-ತ್ರಿಷಾ ಒಳ್ಳೆಯ ಜೋಡಿ ಎಂದು ಒಂದು ಕಾಲದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅವರಿಬ್ಬರು ಜೊತೆಯಾಗಿ ನಟಿಸಿದ ಸಿನಿಮಾಗಳು ಸಾರ್ವಜನಿಕವಾಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡವು. ಇದೀಗ ಅದೇ ಜನಪ್ರಿಯತೆ ಡಿವೋರ್ಸ್​ ವಿವಾದಕ್ಕೆ ತಳುಕು ಹಾಕಿಕೊಂಡಿದೆ. ಕೆಲವು ವರ್ಷಗಳ ಹಿಂದೆ, ವಿಜಯ್ ಮತ್ತು ತ್ರಿಷಾ ವಿದೇಶ ಪ್ರವಾಸ ಮಾಡುತ್ತಿರುವ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಆ ಸಮಯದಲ್ಲೂ ಇಬ್ಬರ ಸಂಬಂಧದ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗಿದ್ದವು.

ಉರಿಯುವ ಬೆಂಕಿಗೆ ತುಪ್ಪ

ಇದಲ್ಲದೆ, ಮಾಸ್ಟರ್ ಚಿತ್ರದ ಆಡಿಯೋ ಬಿಡುಗಡೆ ನಂತರ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಜಯ್ ಜತೆಗೆ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗದ ಕಾರಣ, ವಿಜಯ್ ಮತ್ತು ಸಂಗೀತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ನಟಿ ತ್ರಿಷಾ ಅವರೇ ಇದಕ್ಕೆಲ್ಲ ಕಾರಣ ಎಂಬ ಊಹಾಪೋಹಗಳು ಹಬ್ಬಿದ್ದವು. ಒಟ್ಟಾರೆ, ವಿಜಯ್​ ಮತ್ತು ಸಂಗೀತಾ ಡಿವೋರ್ಸ್​ ಪ್ರಕರಣದಲ್ಲಿ ತ್ರಿಷಾ ಹೆಸರು ಭಾರಿ ಚರ್ಚೆಯಾಗುತ್ತಿದೆ. ಈ ವಿಷಮ ಸನ್ನಿವೇಶದಲ್ಲಿ ನೆಟ್ಟಿಗರು ನಟಿ ತ್ರಿಶಾ ಮಾಡಿದ ಹಳೆಯ ಪೋಸ್ಟ್‌ಗಳನ್ನು ಕೆದಕಿ ಮರುಪೋಸ್ಟ್ ಮಾಡುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ.

ಹಳೇ ಪೋಸ್ಟ್​ನಲ್ಲಿ ಏನಿದೆ?

ಕಳೆದ ವರ್ಷ ಮಾರ್ಚ್ 29 ರಂದು ನಟಿ ತ್ರಿಷಾ ಪ್ರೀತಿಯ ಬಗ್ಗೆ ಮಾಡಿದ್ದ ಇನ್​ಸ್ಟಾಗ್ರಾಂ ಪೋಸ್ಟ್ ಇದೀಗ ವೈರಲ್ ಆಗಿದೆ. ಆ ಪೋಸ್ಟ್‌ನಲ್ಲಿ, ಪ್ರೀತಿ ಯಾವಾಗಲೂ ಗೆಲ್ಲುತ್ತದೆ ಎಂದು ಉಲ್ಲೇಖಿಸಿರುವ ತ್ರಿಷಾ, ವಧುವಿನ ಅಲಂಕಾರದಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿ "ಅಲೈಪಾಯುಡೆ" ಚಿತ್ರದ "ಸೀಕ್ರೆಟ್ ಫ್ರೆಂಡ್" ಹಾಡನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು, ಓಹ್..ಆ ಸೀಕ್ರೆಟ್ ಫ್ರೆಂಡ್ ಯಾರೆಂದು ನನಗೆ ಈಗ ಅರ್ಥವಾಯಿತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಳೆಯ ಪೋಸ್ಟ್​ ಅನ್ನು ಪ್ರಸ್ತುತ ಪರಿಸ್ಥಿತಿಗೆ ಹೋಲಿಸುತ್ತಿದ್ದಾರೆ.

ನಾನು ನಿನ್ನ ಬಿಡುವುದಿಲ್ಲ

ತ್ರಿಷಾ ಅವರದ್ದು ಎನ್ನಲಾದ ಇನ್​ಸ್ಟಾಗ್ರಾಂ ಸ್ಟೋರಿಯ ಸ್ಕ್ರೀನ್​ಶಾಟ್ ಅನ್ನು ಸಹ ಅಭಿಮಾನಿಗಳು ವೈರಲ್​ ಮಾಡುತ್ತಿದ್ದಾರೆ. ಇನ್​ಸ್ಟಾ ಸ್ಟೋರಿಯಲ್ಲಿ ಏನೇ ಆಗಲಿ, ಎಷ್ಟೇ ವಿರೋಧ ಎದುರಾಗಲಿ ನಾವು ಎದರಿಸೋಣ. ಒಂದು ವೇಳೆ ಇಡೀ ಜಗತ್ತು ನಿನ್ನ ವಿರುದ್ಧ ನಿಂತರೆ, ನಾನೆಂದಿಗೂ ನಿನ್ನನ್ನು ಬಿಟ್ಟುಕೊಡುವುದಿಲ್ಲ ಎಂದು ಬರೆಯಲಾಗಿದೆ. ಇದನ್ನು ವಿಜಯ್​ ಉದ್ದೇಶಿಸಿಯೇ ತ್ರಿಷಾ ಹೇಳಿದ್ದಾರೆಂದು ಇದೀಗ ವೈರಲ್​ ಮಾಡುತ್ತಿದ್ದಾರೆ. ಆದರೆ, ಈ ಸ್ಟೋರಿ ಅಸಲಿಯೋ? ನಕಲಿಯೋ? ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ. ಹಳೆಯ ಇನ್‌ಸ್ಟಾಗ್ರಾಂ ಸ್ಟೋರಿಗಳನ್ನು ಹುಡುಕುವುದು ಸವಾಲಿನದ್ದಾಗಿರಬಹುದು ಆದರೆ, ಈ ರೀತಿಯ ಹೈ-ಪ್ರೊಫೈಲ್ ಪ್ರಕರಣಗಳಲ್ಲಿ, ಇಂತಹ ಪೋಸ್ಟ್​ಗಳು ಸಾಮಾನ್ಯವಾಗಿ ಸುದ್ದಿಯಾಗಿರುತ್ತವೆ. ಅದಕ್ಕೆ ಸಂಬಂಧಿಸಿದ ಯಾವುದೇ ಒಂದು ಸಾಕ್ಷಿಗಳು ಸಹ ಇಲ್ಲ. ಹೀಗಾಗಿ, ಈ ಸ್ಟೋರಿಯ ಮೇಲೆ ಅನುಮಾನ ಮೂಡುತ್ತಿದೆ.

ಡಿವೋರ್ಸ್​ಗೆ ಅರ್ಜಿ ಸಲ್ಲಿಕೆ

ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಟ ವಿಜಯ್​ ಅವರು ಚುನಾವಣಾ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಪತ್ನಿ ಸಂಗೀತಾ ಡಿವೋರ್ಟ್​ ಅರ್ಜಿ ಸಲ್ಲಿಸಿದ್ದಾರೆ ಎಂದು ತಮಿಳುನಾಡು ಮಾಧ್ಯಮಗಳು ವರದಿ ಮಾಡುತ್ತಿವೆ. ವಿಜಯ್​ ಮತ್ತು ಪತ್ನಿ ಸಂಗೀತಾ ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಫೆಬ್ರವರಿ 24 ರಂದು ಸಲ್ಲಿಸಲಾದ ಡಿವೋರ್ಸ್​ ಅರ್ಜಿಯು ಏಪ್ರಿಲ್ 20 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಪ್ರಕರಣದ ವಿಚಾರಣೆಗೆ ವಿಜಯ್ ಖುದ್ದಾಗಿ ಹಾಜರಾಗಬೇಕೆಂದು ಚೆಂಗಲ್ಪಟ್ಟು ನ್ಯಾಯಾಲಯ ಆದೇಶಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net