ನೀನು ನನ್ನವನು ಯಾರೊಂದಿಗೂ ನಿನ್ನನ್ನು ಹಂಚಿಕೊಳ್ಳಲ್ಲ... ತ್ರಿಷಾ ಪೋಸ್ಟ್​ ವೈರಲ್! ಏನಿದರ ಅಸಲಿಯತ್ತು? Vijay Divorce

ನೀನು ನನ್ನವನು ಯಾರೊಂದಿಗೂ ನಿನ್ನನ್ನು ಹಂಚಿಕೊಳ್ಳಲ್ಲ... ತ್ರಿಷಾ ಪೋಸ್ಟ್​ ವೈರಲ್! ಏನಿದರ ಅಸಲಿಯತ್ತು? Vijay Divorce
ನೀನು ನನ್ನವನು ಯಾರೊಂದಿಗೂ ನಿನ್ನನ್ನು ಹಂಚಿಕೊಳ್ಳಲ್ಲ... ತ್ರಿಷಾ ಪೋಸ್ಟ್​ ವೈರಲ್! ಏನಿದರ ಅಸಲಿಯತ್ತು? Vijay Divorce
Published on

ಪ್ರಮುಖ ಮುಖ್ಯಾಂಶಗಳು

  • ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ನಟ ವಿಜಯ್​ ದಾಂಪತ್ಯದಲ್ಲಿ ಬಿರುಕು ಮೂಡಿದೆ
  • ವಿಜಯ್​ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ
  • ವಿಜಯ್​ ಡಿವೋರ್ಸ್​ ಸುದ್ದಿಯ ಬೆನ್ನಲ್ಲೇ ನಟಿ ತ್ರಿಷಾ ಹೆಸರು ಸಹ ಭಾರಿ ಚರ್ಚೆಯಾಗುತ್ತಿದೆ
  • ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮತ್ತೊಂದು ಪೋಸ್ಟ್​ ಭಾರಿ ಸಂಚಲನ ಮೂಡಿಸಿದೆ
Vijay Divorce : ತಮಿಳು ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅವರ ವಿಚ್ಛೇದನ ಸುದ್ದಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿಯಿಂದ ಈ ಒಂದು ಚರ್ಚೆ ಹುಟ್ಟಿಕೊಂಡಿತು. ನಟಿಯೊಂದಿಗಿನ ವಿವಾಹೇತರ ಸಂಬಂಧವನ್ನು ಉಲ್ಲೇಖಿಸಿ ಸಂಗೀತಾ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈಗಾಗಲೇ ಸಂಗೀತಾ ಅವರು ವಿಚ್ಛೇದನ ಪ್ರಕ್ರಿಯೆ ಶುರು ಮಾಡಿದ್ದಾರೆ ಎಂಬ ವರದಿಗಳಿವೆ. ಏಪ್ರಿಲ್​ 20ಕ್ಕೆ ಡಿವೋರ್ಸ್​ ಅರ್ಜಿ ವಿಚಾರಣೆಗೆ ಬರಲಿದೆ ಎಂಬ ಸುದ್ದಿಯೂ ಇದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಟ ವಿಜಯ್​ ಬಗ್ಗೆ ದಿನಕ್ಕೊಂದು ಆರೋಪಗಳು ಹಾಗೂ ಕತೆಗಳು ಹುಟ್ಟಿಕೊಳ್ಳುತ್ತಿವೆ. ಇದೀಗ ಮತ್ತೊಮ್ಮೆ ನಟಿ ತ್ರಿಷಾ ಹೆಸರು ಮುನ್ನೆಲೆಗೆ ಬಂದಿದ್ದು, ವಿಜಯ್​ ಡಿವೋರ್ಸ್​ ಪ್ರಕರಣದ ಹಿಂದೆ ತ್ರಿಷಾ ಹೆಸರು ತಳುಕು ಹಾಕಿಕೊಂಡಿದೆ.

ಇದೇ ಮೊದಲೇನಲ್ಲ!

ಅಂದಹಾಗೆ, ನಟ ವಿಜಯ್​ ಮತ್ತು ತ್ರಿಷಾ ನಡುವೆ ಲವ್​ ಅಫೇರ್​ ಇದೆ ಅನ್ನೋ ಚರ್ಚೆ ಇಂದಿನದ್ದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ನಡೆಯುತ್ತಾ ಬರುತ್ತಿದೆ. ಯಾವಾಗ ವಿಜಯ್​ ಅವರು ರಾಜಕೀಯಕ್ಕೆ ಇಳಿದರೋ ಈ ಚರ್ಚೆ ಜೋರಾಗ ತೊಡಗಿದೆ. ತಮಿಳುನಾಡಿನ ಕೆಲ ರಾಜಕೀಯ ನಾಯಕರು ಬಹಿರಂಗವಾಗಿಯೇ ವಿಜಯ್​ ಮತ್ತು ತ್ರಿಷಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಈ ಹಿಂದೆ ತ್ರಿಷಾ, ವಿಜಯ್​ ಅವರ ಹುಟ್ಟುಹಬ್ಬದ ಸಮಯದಲ್ಲಿ 'ಹ್ಯಾಪಿ ಬರ್ತ್ಡೇ ಟು ದಿ ಬೆಸ್ಟ್' ಎಂದು ಶೀರ್ಷಿಕೆ ನೀಡಿ ವಿಜಯ್ ತಮ್ಮ ಪಕ್ಕದಲ್ಲಿ ಕುಳಿತು ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಫೋಟೋ ನೋಡಿದರೆ ವಿಜಯ್ ಅವರು ತ್ರಿಷಾ ಮನೆಯಲ್ಲಿ ಇರುವಂತೆ ಕಾಣುತ್ತಿತ್ತು. ಆಗಲೂ ವಿಜಯ್​-ತ್ರಿಷಾ ಸಂಬಂಧ ಚರ್ಚೆಯಾಗಿತ್ತು. ಅಲ್ಲದೆ, ಈ ಹಿಂದೆ, ಕೀರ್ತಿ ಸುರೇಶ್ ಅವರ ಮದುವೆಗೆ ವಿಜಯ್​ ಮತ್ತು ತ್ರಿಷಾ ಪ್ರೈವೆಟ್​ ಜೆಟ್​ನಲ್ಲಿ ತೆರಳಿದ್ದರು. ಈ ವೇಳೆಯೂ ಭಾರಿ ಸುದ್ದಿಯಾಗಿತ್ತು.

ಇದೀಗ ಮತ್ತೊಂದು ಪೋಸ್ಟ್​ ವೈರಲ್​

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮತ್ತೊಂದು ಪೋಸ್ಟ್​ ಭಾರಿ ಸಂಚಲನ ಮೂಡಿಸಿದೆ. ಪ್ರಸ್ತುತ ವೈರಲ್ ಆಗಿರುವ ಪೋಸ್ಟ್ ಅನ್ನು ತ್ರಿಷಾ ಅವರು ವಿಜಯ್​ ಪತ್ನಿ ಸಂಗೀತಾ ಅವರ ಹುಟ್ಟುಹಬ್ಬದಂದು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿನ ಹಂಚಿಕೊಂಡಿದ್ದರು ಎಂದು ಹೇಳಲಾಗಿದೆ. ಇನ್ನು ಕೆಲವರು ವಿಜಯ್ ಮತ್ತು ಸಂಗೀತಾ ಅವರ ವಿವಾಹ ವಾರ್ಷಿಕೋತ್ಸವದಂದು ಈ ಪೋಸ್ಟ್​ ಅನ್ನು ತ್ರಿಷಾ ಹಂಚಿಕೊಂಡಿದ್ದರು ಎಂದು ಹೇಳಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ವೈರಲ್​ ಪೋಸ್ಟ್​ನಲ್ಲಿ ಏನಿದೆ?

ವೈರಲ್​ ಪೋಸ್ಟ್​ನಲ್ಲಿ, ನಾನು ತುಂಬಾ ಪೊಸೆಸಿವ್. ನಾನು ನಿನ್ನನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದಿಲ್ಲ. ನೀನು ನನ್ನವನು ಎಂದು ಬರೆಯಲಾಗಿದೆ. ತ್ರಿಷಾ ಮೊಬೈಲ್​ನಲ್ಲಿ ಏನೋ ನೋಡುತ್ತಾ, ಒಂದು ಕೈಯಲ್ಲಿ ಗ್ಲಾಸ್​ ಹಿಡಿದಿದ್ದಾರೆ. ಈ ಪೋಸ್ಟ್​ಗೆ ತ್ರಿಷಾ ಹೃದಯದ ಎಮೋಜಿಗಳನ್ನು ಸಹ ಸೇರಿಸಿದ್ದಾರೆ. ಈ ಒಂದು ಪೋಸ್ಟ್​, ಸಂಗೀತಾ ಅವರನ್ನು ಗುರಿಯಾಗಿಸಿಕೊಂಡು ಶೇರ್ ಮಾಡಿರುವ ಪರೋಕ್ಷ ಸಂದೇಶವಾಗಿದೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ.
ಈ ವೈರಲ್​ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ಎಕ್ಸ್ ಮತ್ತು ಇನ್​ಸ್ಟಾಗ್ರಾಂನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಹಲವಾರು ನೆಟ್ಟಿಗರು ಈ ಚಿತ್ರವನ್ನು ಹಂಚಿಕೊಂಡಿದ್ದು, ತ್ರಿಷಾ ಅವರು ವಿಜಯ್ ಜತೆ ಕ್ಲೋಸ್​ ಆಗಿರುವುದು ಸತ್ಯ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಾ ನಟಿ ತ್ರಿಷಾರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ಕೆಲವು ನೆಟ್ಟಿಗರಂತೂ ತ್ರಿಷಾ ಅವರು ವಿಜಯ್​ ಅವರ ದಾಂಪತ್ಯ ಜೀವನವನ್ನೇ ಮುರಿದಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಜವಾಗಿಯೂ ತ್ರಿಷಾ ಹಂಚಿಕೊಂಡಿದ್ರಾ?

ವೈರಲ್​ ಆಗಿರುವ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದಿಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಸ್ಕ್ರೀನ್‌ಶಾಟ್‌ನಲ್ಲಿ ಗೋಚರಿಸುವ ಬಳಕೆದಾರ ಹೆಸರು ತ್ರಿಷಾ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗೆ ಹೊಂದಿಕೆಯಾಗುವುದಿಲ್ಲ. ಬದಲಾಗಿ, ಇದು ಅಭಿಮಾನಿ ಪೇಜ್​ಗೆ ಸೇರಿರುವಂತೆ ಕಾಣುತ್ತದೆ. ಫೋಟೋದಲ್ಲಿ "ತ್ರಿಜಯ್" ಎಂಬ ಹೆಸರಿದೆ. ವಿಜಯ್ ಮತ್ತು ತ್ರಿಷಾ ಜೋಡಿಯನ್ನು ಬೆಂಬಲಿಸುವ ಅಭಿಮಾನಿಗಳು ಈ ಪೋಸ್ಟ್​ ಹರಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದಲ್ಲದೆ, ತ್ರಿಷಾ ಅವರ ಅಧಿಕೃತ ಇನ್​ಸ್ಟಾಗ್ರಾಂನಿಂದ ಅಂತಹ ಯಾವುದೇ ಸ್ಟೋರಿಯನ್ನು ಹಂಚಿಕೊಂಡಿರುವ ಯಾವುದೇ ದಾಖಲೆಗಳಿಲ್ಲ. ಇನ್ನು ಹಳೆಯ ಇನ್‌ಸ್ಟಾಗ್ರಾಂ ಸ್ಟೋರಿಗಳನ್ನು ಹುಡುಕುವುದು ಸವಾಲಿನದ್ದಾಗಿರಬಹುದು ಆದರೆ, ಈ ರೀತಿಯ ಹೈ-ಪ್ರೊಫೈಲ್ ಪ್ರಕರಣಗಳಲ್ಲಿ, ಇಂತಹ ಪೋಸ್ಟ್​ಗಳು ಸಾಮಾನ್ಯವಾಗಿ ಸುದ್ದಿಯಾಗಿರುತ್ತವೆ. ಅದಕ್ಕೆ ಸಂಬಂಧಿಸಿದ ಯಾವುದೇ ಒಂದು ಸಾಕ್ಷಿಗಳು ಸಹ ಇಲ್ಲ.
ಒಟ್ಟಾರೆಯಾಗಿ, ವೈರಲ್ ಸ್ಕ್ರೀನ್‌ಶಾಟ್ ಅಭಿಮಾನಿ ಖಾತೆಯಿಂದ ಹುಟ್ಟಿಕೊಂಡಿರಬಹುದು ಮತ್ತು ಅದನ್ನು ನಟಿಯೇ ಪೋಸ್ಟ್​ ಮಾಡಿರುವಂತೆ ಎಡಿಟ್​ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಡಿವೋರ್ಸ್​ಗೆ ಅರ್ಜಿ ಸಲ್ಲಿಕೆ

ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಟ ವಿಜಯ್​ ಅವರು ಚುನಾವಣಾ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಪತ್ನಿ ಸಂಗೀತಾ ಡಿವೋರ್ಟ್​ ಅರ್ಜಿ ಸಲ್ಲಿಸಿದ್ದಾರೆ ಎಂದು ತಮಿಳುನಾಡು ಮಾಧ್ಯಮಗಳು ವರದಿ ಮಾಡುತ್ತಿವೆ. ವಿಜಯ್​ ಮತ್ತು ಪತ್ನಿ ಸಂಗೀತಾ ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಫೆಬ್ರವರಿ 24 ರಂದು ಸಲ್ಲಿಸಲಾದ ಡಿವೋರ್ಸ್​ ಅರ್ಜಿಯು ಏಪ್ರಿಲ್ 20 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಪ್ರಕರಣದ ವಿಚಾರಣೆಗೆ ವಿಜಯ್ ಖುದ್ದಾಗಿ ಹಾಜರಾಗಬೇಕೆಂದು ಚೆಂಗಲ್ಪಟ್ಟು ನ್ಯಾಯಾಲಯ ಆದೇಶಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net