ಖಾಸಗಿ ವಿಡಿಯೋ ಕರೆಯಿಂದ ಚಾಟಿಂಗ್​​ವರೆಗೆ 99,999 ರೂ. ರೇಟ್ ಫಿಕ್ಸ್ ಮಾಡಿದ ಕಿರಣ್​ ರಾಥೋಡ್! ಏನಿದು ಪ್ರೈವೇಟ್ ವರ್ಲ್ಡ್? Kiran Rathod

ತಾಜಾ ಸಂಗತಿ ಏನೆಂದರೆ, ಕಿರಣ್ ರಾಥೋಡ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟ್​ನಿಂದಾಗಿ ಮತ್ತೊಮ್ಮೆ ಭಾರಿ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದ್ದಾರೆ.
Kiran Rathod
ನಟಿ ಕಿರಣ್​ ರಾಥೋಡ್
Published on

ಚೆನ್ನೈ: ಕ್ಷಣ ಕ್ಷಣ, ಗನ್​ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್​ ರಾಥೋಡ್ ( Kiran Rathod ) ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೂ ಕಿರಣ್​ ಖ್ಯಾತಿ ಪಡೆದಿದ್ದರು. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಇಲ್ಲದಿರುವುದರಿಂದ ಸಿನಿ ಲೋಕದಿಂದ ದೂರವಿರುವ ಕಿರಣ್​, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ, ಕಿರಣ್ ರಾಥೋಡ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟ್​ನಿಂದಾಗಿ ಮತ್ತೊಮ್ಮೆ ಭಾರಿ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದ್ದಾರೆ.

ಇತ್ತೀಚೆಗೆ ಕಿರಣ್​ ರಾಥೋಡ್​ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಮೂಡಿಸಿದೆ. ತಮ್ಮ ಅಭಿಮಾನಿಗಳಿಗಾಗಿ 'ಪ್ರೈವೇಟ್ ವರ್ಲ್ಡ್' (Private World) ಎಂಬ ಡಿಜಿಟಲ್ ವೇದಿಕೆಯನ್ನು ಪರಿಚಯಿಸಿರುವ ಅವರು, ಬರೋಬ್ಬರಿ 99,999 ರೂಪಾಯಿಗಳ 'ವಿವಿಐಪಿ ಮೆಂಬರ್‌ಶಿಪ್' (VVIP Membership) ಪ್ಯಾಕೇಜ್ ಘೋಷಿಸಿದ್ದಾರೆ. ಈ ದುಬಾರಿ ಸದಸ್ಯತ್ವ ಪಡೆಯುವವರಿಗೆ ತಮ್ಮೊಂದಿಗೆ ಅನಿಯಮಿತ ಚಾಟ್, ಖಾಸಗಿ ವಿಡಿಯೋ ಕರೆಗಳು, ಎಕ್ಸ್‌ಕ್ಲೂಸಿವ್ ಕಂಟೆಂಟ್ ಹಾಗೂ ಪ್ರೈವೇಟ್ ಗ್ರೂಪ್‌ಗಳಿಗೆ ಪ್ರವೇಶ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

ನಟಿಯ ಈ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಠಿಣ ಟೀಕೆಗಳು ಕೇಳಿಬರುತ್ತಿವೆ. ಸಮಾಜ ಎತ್ತ ಸಾಗುತ್ತಿದೆ ಎಂಬುದೇ ಆತಂಕಕಾರಿ ವಿಷಯ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. ಈಗಾಗಲೇ ಹಲವರು ಸಣ್ಣ ಮೊತ್ತದ ಮಾಸಿಕ ಚಂದಾದಾರಿಕೆಗಳ ಮೂಲಕ ಹಣ ಸಂಪಾದಿಸುತ್ತಿದ್ದರೂ, 1 ಲಕ್ಷ ರೂಪಾಯಿಯವರೆಗೆ ಶುಲ್ಕ ವಿಧಿಸುತ್ತಿರುವುದು ಮಿತಿಮೀರಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Also Read
ಹೌದು ಹಣಕ್ಕಾಗಿಯೇ ನಾನದನ್ನು ಮಾಡುತ್ತೇನೆ: ಶಕೀಲಾ ಪ್ರಶ್ನೆಗೆ ಕಿರಣ್​ ರಾಥೋಡ್​ ಬೋಲ್ಡ್​ ಉತ್ತರ! Kiran Rathod
Kiran Rathod

ಹಣ ಗಳಿಕೆಗಾಗಿ ಸಾಮಾಜಿಕ ಜಾಲತಾಣಗಳನ್ನು ಈ ರೀತಿಯಾಗಿ ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಜೋರಾಗಿವೆ. ಆದರೆ, ಮತ್ತೊಂದೆಡೆ ಕಿರಣ್ ರಾಥೋಡ್ ಪರವಾಗಿಯೂ ಕೆಲವರು ಧ್ವನಿ ಎತ್ತಿದ್ದಾರೆ. ಕಿರಣ್ ಹಂಚಿಕೊಳ್ಳುವ ಕಂಟೆಂಟ್‌ಗಿಂತ, ಅವರು ನಿಗದಿಪಡಿಸಿರುವ ಅತಿಯಾದ ಶುಲ್ಕದ ಬಗ್ಗೆಯೇ ಕೆಲವರಿಗೆ ಅಸಮಾಧಾನವಿರುವುದಾಗಿ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ನಟಿ ಶಕೀಲಾ ಅವರೊಂದಿಗಿನ ಇತ್ತೀಚಿನ ಸಂದರ್ಶನವೊಂದರಲ್ಲಿ, ಗ್ಲಾಮರ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹಣ ಗಳಿಸುವ ಕುರಿತು ಕಿರಣ್ ರಾಥೋಡ್ ಮುಕ್ತವಾಗಿ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಿರಣ್​ ಹೇಳಿದ್ದೇನು?

ನೀವು ಹಣಕ್ಕಾಗಿ ಆಕರ್ಷಕ ಹಾಗೂ ತುಂಬಾ ಗ್ಲಾಮರಸ್​ ಆಗಿರುವ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದೀರಾ ಎಂದು ಶಕೀಲಾ ಅವರು ಪ್ರಶ್ನೆ ಮಾಡಿದಾಗ, ಯಾವುದೇ ಹಿಂಜರಿಕೆಯಿಲ್ಲದೆ ಹೌದು, ನಾನು ಹಣಕ್ಕಾಗಿಯೇ ಹಂಚಿಕೊಳ್ಳುತ್ತೇನೆ. ಅದರಲ್ಲಿ ಭಾರಿ ಹಣ ಸಿಗುತ್ತದೆ ಎಂದು ಕಿರಣ್ ಓಪನ್​ ಆಗಿಯೇ​ ಉತ್ತರಿಸಿದ್ದಾರೆ.

ಬಿಕಿನಿ ಹಾಗೂ ಅರ್ಧಂಬರ್ಧ ಉಡುಗೆ ಧರಿಸಿದ ಫೋಟೋಗಳನ್ನು ನಾನು ಹಂಚಿಕೊಳ್ಳುತ್ತೇನೆ. ನಾನೊಬ್ಬಳೇ ಅಲ್ಲ, ಸ್ಟಾರ್​ ನಟಿಯರು ಕೂಡ ಹಂಚಿಕೊಳ್ಳುತ್ತಾರೆ. ಆದರೆ, ನನ್ನೊಬ್ಬಳನ್ನೇ ಏಕೆ ಟಾರ್ಗೆಟ್​ ಮಾಡುತ್ತೀರಾ ಎಂದು ಕಿರಣ್​ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು. ಅಲ್ಲದೆ, ಯಾರು ಏನೇ ಹೇಳಲಿ ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರಿಗೆ ಅವರಿಗೆ ಅನಿಸಿದ್ದನ್ನು ಬರೆಯುವ ಹಕ್ಕಿದೆ. ನನಗೆ ಮೂರು ಮದುವೆ ಆಗಿದೆ ಮತ್ತು ಮೂವರು ಮಕ್ಕಳಿದ್ದಾರೆ ಎಂದು ಬರೆದಿದ್ದಾರೆ. ಆದರೆ, ನನಗೆ ಎಲ್ಲಿ ಮದುವೆಯಾಗಿದೆ? ಮಕ್ಕಳು ಎಲ್ಲಿದ್ದಾರೆ? ಬೇಕಾದನ್ನು ಬರೆಯುತ್ತಿದ್ದಾರೆ. ಈ ಮೊದಲು ಏನಾದರೂ ಬರೆದುಕೊಳ್ಳಲಿ ಅಂತ ಸುಮ್ಮನಿದ್ದೆ ಆದರೆ, ಈಗ ಸ್ಪಷ್ಟನೆ ಕೊಡಲೇಬೇಕಿದೆ. ಅದಕ್ಕಾಗಿ ನಾನು ಸಂದರ್ಶನಗಳನ್ನು ಕೊಡಲು ಆರಂಭಿಸಿದ್ದೇನೆ ಎಂದು ಕಿರಣ್​ ಅವರು ಹೇಳಿದ್ದಾರೆ.

Also Read
ಅಂದುಕೊಂಡಿದ್ದೆ ಒಂದು ಆಗಿದ್ದು ಮತ್ತೊಂದು! 15 ಲಕ್ಷ ರೂ. ಕಳ್ಕೊಂಡು ಕಣ್ಣೀರಿಟ್ಟ ನಟಿ ಕಿರಣ್​ ರಾಥೋಡ್​
Kiran Rathod

ಅಂದಹಾಗೆ, 43 ವರ್ಷದ ಕಿರಣ್​ ಈಗೀಗ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಹೊರತುಪಡಿಸಿ ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳ ಮೈ ಬಿಸಿಯೇರಿಸುತ್ತಿರುತ್ತಾರೆ. ಕಿರಣ್​ ಅವರು ಇನ್​ಸ್ಟಾಗ್ರಾಂಗೆ ಸೀಮಿತವಾಗದೆ, ಈ ಹಿಂದೆ ಆ್ಯಪ್​ ಒಂದನ್ನು ಆರಂಭಿಸಿ ಸುದ್ದಿಯಾಗಿದ್ದರು. ಇದೀಗ ಆ ಆ್ಯಪ್​ ಕಾರ್ಯನಿರ್ವಹಿಸುತ್ತಿಲ್ಲ. kiran.celebgaze.in ಎಂಬ ಆ್ಯಪ್​ ಮತ್ತು ವೆಬ್​ಸೈಟ್​ ತೆರೆದಿದ್ದರು. ಮೊಬೈಲ್​ನಲ್ಲಿ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಲು 49 ರೂ. ನಿಗದಿಪಡಿಸಿದ್ದರು. ಅಲ್ಲದೆ, ಆ್ಯಪ್​ ಮೂಲಕ ಸಾವಿರಾರು ರೂಪಾಯಿ ಪಾವತಿಸಿದವರಿಗೆ ಕಿರಣ್​ ಅವರು ಗ್ಲಾಮರಸ್​ ಫೋಟೋಗಳನ್ನು ಕಳುಹಿಸುತ್ತಿದ್ದರು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net