ಜನವರಿ 9 ರಂದು ಸಿನಿಮಾ ಬಿಡುಗಡೆಯಾಗಬೇಕಿದ್ದು, ಇನ್ನೂ ಪ್ರಮಾಣಪತ್ರ ಸಿಗದ ಕಾರಣ ಚಿತ್ರತಂಡ ಆತಂಕಕ್ಕೆ ಒಳಗಾಗಿದೆ. ಹೀಗಾಗಿ, ನಿರ್ಮಾಣ ಕಂಪನಿ, ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿಯನ್ನು ಸಲ್ಲಿಸಿದೆ. ಸೆನ್ಸಾರ್ ಪ್ರಮಾಣಪತ್ರವನ್ನು ತ್ವರಿತವಾಗಿ ನೀಡಬೇಕು ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಇಂದು (ಜನವರಿ 07) ಮದ್ರಾಸ್ ಹೈಕೊರ್ಟ್ನಲ್ಲಿ ವಿಚಾರಣೆ ಸಹ ನಡೆಯಿತು. ನಾವು ಸೆನ್ಸಾರ್ ಮಂಡಳಿ ಸೂಚಿಸಿದ ಎಲ್ಲ 27 ಕಟ್‌ಗಳನ್ನು ಮಾಡಿದ್ದೇವೆ. ಸಿನಿಮಾ ಇನ್ನೂ ಸಾರ್ವಜನಿಕವಾಗಿ ಬಿಡುಗಡೆಯೇ ಆಗಿಲ್ಲದಿರುವಾಗ, ಅದರ ವಿರುದ್ಧ ದೂರು ಬಂದಿರುವುದು ಸಂಶಯಾಸ್ಪದವಾಗಿದೆ ಎಂದು ನಿರ್ಮಾಪಕರ ಪರ ವಕೀಲ ಪರಾಸರನ್ ವಾದಿಸಿದ್ದಾರೆ.