ಪುತ್ರಿ ಐಶ್ವರ್ಯಾ ದಾಂಪತ್ಯದ ಬಗ್ಗೆ ಆನ್‌ಲೈನ್ ಟ್ರೋಲ್, ಕಾನೂನು ಸಮರಕ್ಕೆ ಇಳಿದ ಅರ್ಜುನ್ ಸರ್ಜಾ! Arjun Sarja

Actor Arjun Sarja has decided to take legal action against online trolls targeting his daughter, Aishwarya Sarja.
ಪುತ್ರಿ ಐಶ್ವರ್ಯಾ ಸರ್ಜಾ ಕುರಿತ ಆನ್‌ಲೈನ್ ಟ್ರೋಲ್‌ಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿರುವ ನಟ ಅರ್ಜುನ್ ಸರ್ಜಾ
Published on: 

ಚೆನ್ನೈ: ಕಳೆದ ಅಕ್ಟೋಬರ್​ ತಿಂಗಳಿನಲ್ಲಿ ಬಹುಭಾಷಾ ನಟ ಅರ್ಜುನ್​ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ, ಐಸಾಯಾ ನಟ್ಟರ್​ ಎಂಬಾತನ ಜತೆಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಸಂದರ್ಭದಲ್ಲಿ ಅರ್ಜುನ್​ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ ಬಗ್ಗೆ ಕೆಲ ವದಂತಿಗಳು ಹಾಗೂ ಆನ್​ ಲೈನ್​ ಟ್ರೋಲ್​ಗಳು ನಡೆದಿದ್ದವು.

ಈಗ, ತಮ್ಮ ಮನೆ ಮಕ್ಕಳ ಬಗ್ಗೆ ಸೋಷಿಯಲ್​ ಮೀಡಿಯಾನಲ್ಲಿ ನಡೆಯುತ್ತಿರುವ ಆನ್​ಲೈನ್​ ಬುಲ್ಲಿಂಗ್​​ಗೆ ಕಡಿವಾಣ ಹಾಕಲು ಖುದ್ದು ಅರ್ಜುನ್​ ಸರ್ಜಾ ಅಖಾಡಕ್ಕೆ ಇಳಿದಿದ್ದು, ಪೊಲೀಸ್​ ಕಂಪ್ಲೆಂಟ್​ ಜತೆಗೆ ಖಡಕ್​ ಎಚ್ಚರಿಕೆಯನ್ನು ನೀಡಿದ್ದಾರೆ.

ತೇಜೋವಧೆ ಮಾಡಬೇಡಿ!

ಈ ವಿಚಾರವಾಗಿ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಅರ್ಜುನ್​ ಸರ್ಜಾ, ಮೊದಲನೆಯದಾಗಿ ನನ್ನ ಕಿರಿಯ ಪುತ್ರಿ ಅಂಜನಾಳ ಮದುವೆಗೆ ಆಗಮಿಸಿ, ಆಕೆ ಆರ್ಶೀವಾದ ನೀಡಿದವರಿಗೆಲ್ಲಾ ಧನ್ಯವಾದಗಳು. ಇನ್ನು ನನ್ನ ಹಿರಿಯ ಪುತ್ರಿ ಐಶ್ವರ್ಯಾ ಕುರಿತು ಆನ್​ಲೈನ್​ನಲ್ಲಿ ಹರಿದಾಡುತ್ತಿರುವ ಸುದ್ದಿಗಳು ನನ್ನ ಗಮನಕ್ಕೆ ಬಂದಿದೆ.

ಆದರೆ, ಆಕೆಯ ವೈಯಕ್ತಿಕ ಸಂಗತಿಗಳ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ. ಸರಿಯಾದ ಸಮಯ ಅಥವಾ ಮಾತನಾಡಬೇಕೆನ್ನಿಸಿದರೇ ಅವಳೇ ಇವಕ್ಕೆಲ್ಲಾ ಸ್ಪಷ್ಟನೆ ನೀಡುತ್ತಾಳೆಂದು ಹೇಳಿದ್ದಾರೆ. ಆದರೆ ಅಲ್ಲಿವರೆಗೆ ಏನೂ ವಿಚಾರ ಗೊತ್ತಿಲ್ಲದೆ ಸುಮ್ಮನೇ ಅವಹೇಳನ ಮಾಡಬೇಡಿ ಎಂದಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದರೆ ಹುಷಾರ್​!

ನಾವು ನಟರಾಗಿ ಸಾರ್ವಜನಿಕ ಜೀವನದಲ್ಲಿದ್ದಾಗ ಟೀಕೆ, ಆಪಾದನೆ ಹಾಗೂ ಊಹಾಪೋಗಳನ್ನು ಎದುರಿಸಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ, ನಟ-ನಟಿಯರ ಅವರ ಕುಟುಂಬದವರ ಚಾರಿತ್ರ್ಯ ಹರಣ ಮಾಡಲು ಯಾರು, ಯಾರಿಗೂ ಅಧಿಕಾರ ನೀಡಲ್ಲ ಎಂದು ಅರ್ಜುನ್​ ಗುಡುಗಿದ್ದಾರೆ.

ಯಾವುದೇ ಆಧಾರವಿಲ್ಲದೇ, ಸುಮ್ಮನೇ ಅಪವಾದ ಮಾಡಬೇಕೆಂದು ಒಬ್ಬ ಮಹಿಳೆಯನ್ನು ಮದ್ಯವ್ಯಸನಿ, ಕುಡುಕಿ ಎಂದು ಕರೆಯುವುದು ಅಕ್ಷಮ್ಯ ಅಪರಾಧವಾಗಿದ್ದು, ಈ ರೀತಿ ಮಾಡುವವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸರ್ಜಾ ತಿಳಿಸಿದ್ದಾರೆ.

Also Read
ಜಾಗತಿಕ ರಾಜಕೀಯದಲ್ಲಿ ಭಾರತ 'ಸೈಡ್ ಪ್ಲೇಯರ್ ಎಂದ ರಾಹುಲ್:​ ಇವನೊಬ್ಬ ಪಾಕಿಸ್ತಾನದ ಚಿಯರ್‌ಲೀಡರ್​, ಬಿಜೆಪಿ ಕೌಂಟರ್​! Rahul Gandhi
Actor Arjun Sarja has decided to take legal action against online trolls targeting his daughter, Aishwarya Sarja.

ಎಲ್ಲದಕ್ಕೂ ಮೌನ ಉತ್ತರವಲ್ಲ!

ನಾನು, ನನ್ನ ಮಕ್ಕಳ ಕುರಿತಾಗಿ ನಡೆಯುತ್ತಿದ್ದ ಟ್ರೋಲಿಂಗ್​ಅನ್ನು ಮೊದಲಿನಿಂದಲೇ ಗಮನಿಸುತ್ತಿದೆ. ಆದರೆ, ಎಲ್ಲದಕ್ಕೂ ಪ್ರತಿಕ್ರಿಯೆ ಕೊಡುವ ಬದಲು, ಕೆಲವೊಂದಕ್ಕೆ ಮೌನ ವಹಿಸುದೇ ಸೂಕ್ತವೆಂದು ನಾನು ತಿಳಿದಿದ್ದೆ. ಆದರೆ, ನಮ್ಮ ಮೌನವನ್ನು, ನಮ್ಮ ದೌರ್ಬಲ್ಯವೆಂದು ತಿಳಿಯಬೇಡಿ. ನಾವು ಸುಮ್ಮನಿದ್ದರೆ, ನಮ್ಮದೇ ಏನೋ ತಪ್ಪಿದೆ ಎಂದು ಅನಿಸುತ್ತದೆ. ಹೀಗಾಗಿ ನಾನು ಈಗ ಪ್ರತಿಕ್ರಿಯೆ ನೀಡುತ್ತಿದ್ದೆನೆ.

ಇದು ಕೇವಲ ನನ್ನ ಮಕ್ಕಳಿಗಲ್ಲ, ಸಮಾಜದ ಯಾವ ಹೆಣ್ಣಿಗೂ ಈ ರೀತಿ ಆನ್​ಲೈನ್​ ದಾಳಿಗಳು ನಡೆಯಬಾರದು. ಹೀಗಾಗಿ ನಾನು ಈಗ ಪೊಲೀಸ್​​ ಹಾಗೂ ಕಾನೂನಿನ ಮಾರ್ಗದಲ್ಲಿ ಇವನ್ನು ಎದುರಿಸಲಿದ್ದೇನೆಂದು ಅರ್ಜುನ್​ ಸರ್ಜಾ ಬರೆದುಕೊಂಡಿದ್ದಾರೆ.

Also Read
ಸಚಿವರ ಕಚೇರಿ ಬಳಿ ಗುಂಡು ಹಾರಿಸಿದ್ದ ಗ್ಯಾಂಗ್‌ಸ್ಟರ್ ಫಿನಿಶ್: ದಾವೂದ್ ಬಂಟ ನಸೀಮ್ ದುರ್ರಾನಿ ಎನ್‌ಕೌಂಟರ್! Naseem Durrani
Actor Arjun Sarja has decided to take legal action against online trolls targeting his daughter, Aishwarya Sarja.

ಏನಿದು ಟ್ರೋಲ್​?

ಕೆಲ ದಿನಗಳ ಹಿಂದೆ ಅರ್ಜುನ್​ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅವರ ಮದುವೆಗೆ ಅಕ್ಕನ ಗಂಡ ಹಾಗೂ ಮಾವ, ಅಂದರೆ ಐಶ್ವರ್ಯಾ ಅವರ ಪತಿ ಉಮಾಪತಿ ರಾಮಯ್ಯ ಹಾಗೂ ಅವರ ತಂದೆ ಥಂಬಿ ರಾಮಯ್ಯ ಹಾಜರಾಗಿರಲಿಲ್ಲ. ಹಾಗೂ ನವೆಂಬರ್​ನಲ್ಲಿ ಉಮಾಪತಿ ರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಪತ್ನಿ ಐಶ್ವರ್ಯಾ ಸೋಷಿಯಲ್​ ಮೀಡಿಯಾನಲ್ಲಿ ಯಾವುದೇ ಶುಭಾಷಯ ತಿಳಿಸದೇ ಇರುವುದು, ಇವರಿಬ್ಬರ ಸಂಸಾರ ಸರಿಯಾಗಿ ಸಾಗುತ್ತಿಲ್ಲ ಎಂಬ ವದಂತಿಗೆ ದಾರಿ ಮಾಡಿಕೊಟ್ಟಿತು. ಈ ಬಗ್ಗೆ ಯೂಟ್ಯೂಬರ್​​ ಒಬ್ಬ ವಿಡಿಯೋ ಮಾಡಿದ ಬೆನ್ನಲ್ಲೆ ಐಶ್ವರ್ಯಾ ಅವರ ತೇಜೋವಧೆ ಆಗುವಂತಹ ಟ್ರೋಲ್​​ಗಳನ್ನು ಮಾಡಲು ಪ್ರಾರಂಭಿಸಲಾಯಿತು. ಆದರೆ ಈ ಬಗ್ಗೆ ಐಶ್ವರ್ಯಾ ಆಗಲೀ ಆಕೆಯ ಪತಿ ಉಮಾಪತಿ ರಾಮಯ್ಯ ಆಗಲೀ ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ,(ಏಜೆನ್ಸೀಸ್​).