ಛೀ... ಅದನ್ನು ಕೊಟ್ಟು ನನ್ನ ದೇಹ ನೋಡಲು ಬಯಸಿದ್ದ; ಆತನ ಕರಾಳ ಮುಖ ಕಳಚಿದ ನಟಿ ಐಶ್ಚರ್ಯ ರಾಜೇಶ್ | Aishwarya Rajesh

ನಟಿ ಐಶ್ವರ್ಯ ರಾಜೇಶ್​
ನಟಿ ಐಶ್ವರ್ಯ ರಾಜೇಶ್​
Published on

ಪ್ರಮುಖ ಮುಖ್ಯಾಂಶಗಳು

  • ಶಾಕಿಂಗ್ ಘಟನೆ ಬಿಚ್ಚಿಟ್ಟ ಕಾಲಿವುಡ್​ ಬ್ಯೂಟಿ ಐಶ್ವರ್ಯ ರಾಜೇಶ್​
  • ಫೋಟೋಶೂಟ್​ ವೇಳೆ ಫೋಟೋಗ್ರಾಫರ್ ಆಡಿದ ಮಾತನ್ನು ನೆನೆದ ನಟಿ
  • ಒಳ ಉಡುಪು ಧರಿಸಲು ಹೇಳಿದ್ದಲ್ಲದೇ....
ಕೇರಳ: ದುಲ್ಕರ್ ಸಲ್ಮಾನ್ ಅಭಿನಯದ 'ಜೋಮೊಂಟೆ ಸುವಿಶೇಷಂಗಲ್' ಚಿತ್ರದ ಮೂಲಕ ಮಾಲಿವುಡ್​ಗೆ ಪದಾರ್ಪಣೆ ಮಾಡಿದ ಬ್ಯೂಟಿ ಐಶ್ವರ್ಯ ರಾಜೇಶ್​, ಸಿನಿ ಕರಿಯರ್​ನ ಆರಂಭದಲ್ಲಿ ತಾವು ಅನುಭವಿಸಿದ ಕಹಿ ಘಟನೆಯೊಂದರ ಬಗ್ಗೆ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ. 
ಪ್ರಸ್ತುತ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯ, ಇದೇ ಚಿತ್ರೋದ್ಯಮಕ್ಕೆ ಬರುವ ಮೊದಲು ಒಂದು ಫೋಟೋಶೂಟ್​ ಮಾಡಿಸಿದ್ದರಂತೆ. ಆ ಸಮಯದಲ್ಲಿ ಚೆಂದದ ಫೋಟೋಗಳನ್ನು ಕ್ಲಿಕ್ಕಿಸಬೇಕಿದ್ದ ಫೋಟೋಗ್ರಾಫರ್​ ಆಡಿದ ಅದೊಂದು ಮಾತು ಒಂದು ನಿಮಿಷ ಭಾರೀ ಆತಂಕಕ್ಕೆ ದೂಡಿತು ಎಂದಿದ್ದಾರೆ. 
"ಆ ಸಮಯದಲ್ಲಿ ನಾನಿನ್ನು ಪೂರ್ಣವಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಸಿನಿ ಇಂಡಸ್ಟ್ರಿಯಲ್ಲಿ ಹೇಗೆಲ್ಲ ನಡೆಯುತ್ತೆ ಎಂಬುದರ ಕಿಂಚಿತ್ತು ಅರಿವು ನನಗಿರಲಿಲ್ಲ. ನಾನು ನನ್ನ ಸಹೋದರನೊಂದಿಗೆ ಚಿತ್ರೀಕರಣಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಓರ್ವ ಫೋಟೋಗ್ರಾಫರ್​, ನನ್ನ ಸಹೋದರನನ್ನು ಹೊರಗಿರಲು ಹೇಳಿ, ನನ್ನನ್ನು ಮಾತ್ರ ಒಳಗೆ ಕರೆದುಕೊಂಡು ಹೋದ. ನನ್ನ ಕೈಗೆ ಒಳ ಉಡುಪು ಕೊಟ್ಟು, ಅದನ್ನು ಧರಿಸುವಂತೆ ಹೇಳಿ, ನಾನು ನಿಮ್ಮ ದೇಹವನ್ನು ನೋಡಬೇಕು ಎಂದು ಕೇಳಿದ" ಎಂದಿದ್ದಾರೆ.
ನಿಖಿಲ್ ವಿಜಯೇಂದ್ರ ಸಿಂಹ ಅವರ ಪಾಡ್​ಕಾಸ್ಟ್​ನಲ್ಲಿ ಈ ಬಗ್ಗೆ ಮಾತನಾಡಿರುವ ಐಶ್ವರ್ಯ, "ಇಲ್ಲಿ ಕೆಲವು ವಿಷಯಗಳು ಹೀಗೆಯೇ ಆಗಬಹುದು ಅಂತ ಆಗ ನನಿಗೆ ಅನಿಸಿತು. ಇನ್ನೂ ಐದು ನಿಮಿಷಗಳ ಕಾಲ ನಾನೇನಾದರೂ ಆತನೊಂದಿಗೆ ಮಾತು ಮುಂದುವರಿಸಿದ್ದರೆ ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗಿರುತ್ತಿತ್ತು. ಅನುಮಾನದಿಂದ ತಕ್ಷಣವೇ ನನ್ನ ಸಹೋದರನ ಅನುಮತಿ ಕೇಳಿ ಬರುವೆ ಎಂದು ಹೇಳಿ ಅಲ್ಲಿಂದ ಹೊರಬಂದೆ" ಎಂದು ಹೇಳಿದ್ದಾರೆ.
"ಆ ಘಟನೆಯನ್ನು ನನ್ನ ಸಹೋದರನಿಗೆ ಹೇಳಲೇ ಇಲ್ಲ. ನನಗೆ ಅನಿಸೋದು, ಆತ ಎಷ್ಟು ಹುಡುಗಿಯರಿಗೆ ಇದೇ ರೀತಿ ಮಾಡಿರಬಹುದು ಎಂಬುದನ್ನು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ" ಎಂದು ಐಶ್ಚರ್ಯ ತಮ್ಮ ಕಹಿ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net