ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಹೆಚ್ಚಳದಿಂದಾಗಿ ಸಿಗರೇಟ್, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳು ಹೆಚ್ಚು ದುಬಾರಿಯಾಗಲಿವೆ. ಬಜೆಟ್ ಮಂಡನೆಗೂ ಮೊದಲೇ ಈ ವಿಷಯ ಮಾರಾಟಗಾರರಿಗೆ ಹಾಗೂ ಖರೀದಿಗಾರರಿಗೆ ಗೊತ್ತಿತ್ತು. ಆದರೆ, ದರದಲ್ಲಿ ಕೊಂಚ ಏರಿಕೆ ಕಾಣಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಬಜೆಟ್ ನಂತರ ಬೆಲೆ ಹಿಂದಿನಕ್ಕಿಂತ ಹೆಚ್ಚು ದುಬಾರಿ ಆಗಲಿದೆ ಎಂಬ ವಿಷಯ ಸದ್ಯ ದೊಡ್ಡ ತಲೆನೋವು ತಂದಿಟ್ಟಿದೆ.