ತಾಜಾ ಸಂಗತಿ ತಿಳಿಯುವ ಮುನ್ನ ಸುಚಿತ್ರಾಳ ಹಳೆಯ ಪ್ರಕರಣದ ಬಗ್ಗೆ ಮೊದಲು ತಿಳಿದುಕೊಳ್ಳೋಣ. 2017ರಲ್ಲಿ ಸುಚಿತ್ರಾ ಅವರ ಟ್ವಿಟರ್ ಪೇಜ್ನಿಂದ ಕಾಲಿವುಡ್ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಹೊರಬಿದ್ದ ಬಳಿಕ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದಂತೆ ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು ಎಂದು ಸುಚಿತ್ರಾ ಸ್ಪಷ್ಟನೆ ನೀಡಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಅವರ ಸಹಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸುಚಿತ್ರಾ ಆರೋಪಿದ್ದರು. ಅಲ್ಲದೆ, ಧನುಷ್ ಅವರು ನನಗೆ ಡ್ರಗ್ಸ್ ನೀಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಕಾಲಿವುಡ್ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್ ಕೌಚ್ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು. ಟ್ವಿಟರ್ ಖಾತೆಯಲ್ಲಿ ಧನುಷ್, ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಮತ್ತು ನಟಿಯರಾದ ಆಂಡ್ರಿಯಾ ಜೆರೆಮಿಯಾ, ತ್ರಿಷಾ, ಅಮಲಾ ಪೌಲ್ ಹಾಗೂ ಸಂಚಿತಾ ಶೆಟ್ಟಿ ಅವರ ಕೆಲ ಫೋಟೋಗಳು ಮತ್ತು ವಿಡಿಯೋಗಳು ಜಾಗತಿಕ ಗಮನವನ್ನು ಸೆಳೆದವು. ಈ ಪ್ರಕರಣ ಕಾಲಿವುಡ್ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿ, ಕೊನೆಗೆ ತಣ್ಣಗಾಯಿತು.