ಕನ್ನಡಕ್ಕೆ ಕರಾವಳಿ ಚೆಲುವೆ ಅನುಷ್ಕಾ

ullasa-2
Published on

ಬೆಂಗಳೂರು: ಆಕೆ ಕನ್ನಡತಿ. ಕರಾವಳಿಯ ಬೆಡಗಿ. ಆದರೆ, ಇಲ್ಲಿಯವರೆಗೂ ಒಂದೇ ಒಂದು ಕನ್ನಡ ಸಿನಿಮಾದಲ್ಲಿ ಅನುಷ್ಕಾ ಕಾಣಿಸಿಕೊಂಡಿಲ್ಲ. ಇದೀಗ ಇದೇ ಅನುಷ್ಕಾ ಕನ್ನಡಕ್ಕೆ ಬರುತ್ತಿದ್ದಾರೆ. ಅದೂ ನಿಶ್ಯಬ್ದವಾಗಿ!

ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಅಭಿನಯದಲ್ಲಿ ‘ನಿಶ್ಯಬ್ದಂ’ ಎಂಬ ಚಿತ್ರ ನಿರ್ವಣವಾಗಿದೆ. ಈಗ ಆ ಚಿತ್ರವು ತಮಿಳು ಮತ್ತು ಮಲಯಾಳಂ ಜತೆಗೆ ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆ. ಮೊದಲ ಹೆಜ್ಜೆಯಾಗಿ, ಸೋಮವಾರ ಸಂಜೆ 5 ಗಂಟೆಗೆ ‘ನಿನ್ನೇ ನಿನ್ನೇ ...’ ಹಾಡನ್ನು ಬಿಡುಗಡೆ ಮಾಡುವ ಮೂಲಕ, ಚಿತ್ರವು ಕನ್ನಡದಲ್ಲಿಯೂ ತೆರೆಗೆ ಬರಲಿದೆ ಎಂಬ ಮುನ್ಸೂಚನೆ ನೀಡಿದೆ.

ಹೇಮಂತ್ ಮಧುಕರ್ ನಿರ್ದೇಶನದ ‘ನಿಶ್ಯಬ್ದಂ’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿಗೆ ಜೋಡಿಯಾಗಿ ಮಾಧವನ್ ನಟಿಸಿದ್ದು, ಈಗಾಗಲೇ ಟ್ರೇಲರ್ ಸಹ ರಿಲೀಸ್ ಆಗಿ ಕುತೂಹಲ ಮೂಡಿಸಿದೆ. ಎಲ್ಲ ಎಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಏಪ್ರಿಲ್​ನಲ್ಲಿ ಬಿಡುಗಡೆ ಎಂದು ಘೊಷಿಸಲಾಗಿತ್ತು. ಕರೊನಾ ಲಾಕ್​ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲಾಗಿದೆ. ಚಿತ್ರ ಪ್ರದರ್ಶನ ಯಾವಾಗಿನಿಂದ ಪ್ರಾರಂಭ ಎಂಬ ಸ್ಪಷ್ಟ ಚಿತ್ರಣ ಇಲ್ಲದಿರುವುದರಿಂದ ಓವರ್ ದಿ ಟಾಪ್ (ಓಟಿಟಿ)ನಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತೂ ಕೇಳಿಬರುತ್ತಿದೆ.

ಈ ಕುರಿತು ಚರ್ಚೆಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರ ಎಲ್ಲಿ ಬಿಡುಗಡೆಯಾಗುತ್ತದೆ ಎಂದು ನಿರ್ವಪಕ ಕೋನ ವೆಂಕಟ್ ಅವರೇ ಅಧಿಕೃತವಾಗಿ ಘೊಷಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net