

2022 ಹೊಸ ವರ್ಷಕ್ಕೆ ತಾರೆಯರ ಕಲರ್ಫುಲ್ ಸ್ವಾಗತ ಸಿಕ್ಕಿದೆ. ಕೆಲವರು ತಾವಿದ್ದ ಸ್ಥಳದಲ್ಲಿಯೇ ಸರಳವಾಗಿ ಹೊಸ ವರ್ಷವನ್ನು ಸ್ವಾಗತಿಸಿದರೆ, ಇನ್ನು ಕೆಲವರು ದೇಶ ವಿದೇಶಗಳ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಸಂಭ್ರಮಿಸಿದ್ದಾರೆ. ಇನ್ನು ಕೆಲವರು ಎಲ್ಲಿ ಹೋಗಿದ್ದೇವೆ ಎಂಬ ಸಣ್ಣ ಸುಳಿವನ್ನೂ ನೀಡದೆ, ಸೋಷಿಯಲ್ ಮೀಡಿಯಾದಲ್ಲಿಯೇ ಶುಭಾಶಯ ಕೋರಿದ್ದಾರೆ. ನಟ ಗಣೇಶ್ ತಮ್ಮ ಮನೆಯಲ್ಲಿಯೇ ಗ್ರ್ಯಾಂಡ್ ಪಾರ್ಟಿ ಆಯೋಜನೆ ಮಾಡಿ, ಉಪೇಂದ್ರ, ಗುರುಕಿರಣ್ ಸೇರಿ ಚಿತ್ರರಂಗದ ಹತ್ತಾರು ಸ್ನೇಹಿತರೊಟ್ಟಿಗೆ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸಹ ಫೋಟೋವೊಂದನ್ನು ಶೇರ್ ಮಾಡಿಕೊಂಡು, ಶುಭಾಶಯ ತಿಳಿಸಿದ್ದಾರೆ. ಅದೇ ರೀತಿ ಕಾಲಿವುಡ್ ನಟಿ ನಯನತಾರಾ ಪ್ರಿಯತಮ ವಿಘ್ನೇಶ್ ಶಿವನ್ ಜತೆಗೆ ದುಬೈಗೆ ತೆರಳಿದರೆ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಪರಿವಾರದ ಜತೆಗೆ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ. ಮಹೇಶ್ ಬಾಬು ಕುಟುಂಬದ ಜತೆ ವಿದೇಶಕ್ಕೆ ಹಾರಿದ್ದಾರೆ. ಅನುಷ್ಕಾ ಶರ್ವ- ಕೊಹ್ಲಿ ದಂಪತಿ ಆಫ್ರಿಕಾದಲ್ಲಿಯೇ ಪಾರ್ಟಿ ಮಾಡುತ್ತಿದ್ದಾರೆ. ಕರೀನಾ ಕಪೂರ್, ಸೈಫ್ ಅಲಿ ಖಾನ್, ಸೋಹಾ ಅಲಿಖಾನ್ ಮನೆಯಲ್ಲಿಯೇ 2020ನ್ನು ಬರಮಾಡಿಕೊಂಡಿದ್ದಾರೆ.
ಇತ್ತ ಮುಂಬೈ ಹೊರವಲಯದಲ್ಲಿ ಪಾನ್ವೆಲ್ ಫಾಮ್ರ್ ಹೌಸ್ನಲ್ಲಿ ಸಲ್ಮಾನ್ ಖಾನ್ ಮತ್ತವರ ಸ್ನೇಹಿತರೆಲ್ಲ ಒಟ್ಟಿಗೆ ಸೇರಿ ವರ್ಷಾಚರಣೆ ಮಾಡಿದ್ದಾರೆ. ಅದೇ ರೀತಿ ನಟಿ ಸಮಂತಾ ಗೋವಾದಲ್ಲಿ ಕಾಲಕಳೆದರೆ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಹೊಟೇಲ್ವೊಂದರಲ್ಲಿ ತಂಗಿದ್ದು, ಹೊಸ ವರ್ಷದ ಖುಷಿಯನ್ನು ಒಟ್ಟಿಗೆ ಕಳೆದಿದ್ದಾರೆ. ಆ ಸಂಭ್ರಮದ ಫೋಟೋಗಳು ಇಲ್ಲಿವೆ.