

ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಕಾಲೆಳೆಯುವವರು ಸಾಕಷ್ಟು ಮಂದಿ. ಅವರು ಒಳ್ಳೆಯದನ್ನೇ ಮಾಡಲಿ, ಕೆಟ್ಟದ್ದೇ ಮಾಡಲಿ ಒಟ್ಟಿನಲ್ಲಿ ಅವರನ್ನು ಟ್ರೋಲ್ ಮಾಡಬೇಕು, ಅವರನ್ನು ಚುಡಾಯಿಸಬೇಕು ಎಂಬುದೇ ಕೆಲವರ ಕೆಲಸ. ಇದೀಗ ಆ ಪ್ರಸಂಗ ಹಾಲಿವುಡ್ ನಟಿಗೂ ಬಂದಿದೆ. ಅಷ್ಟಕ್ಕೇ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಸ್ತನ ಪ್ರದರ್ಶನ ಮಾಡಿ, ಎಲ್ಲರ ಬಾಯಿ ಮುಚ್ಚಿಸಿದ್ದಾರೆ!
ಅರೇ, ಅಷ್ಟಕ್ಕೂ ನೆಟ್ಟಿಗರು ಆ ನಟಿಗೆ ಅಂದಿದ್ದಾರೂ ಏನು? ಆ ಒಂದು ಮಾತಿಗೆ ಸ್ತನ ಪ್ರದರ್ಶನ ಮಾಡುವುದೇ? ಹೌದು, ನ್ಯೂಯಾರ್ಕ್ ಮೂಲದ ನಟಿ, ಮಾಡೆಲ್ ಕ್ರಿಸ್ಸಿ ಟೈಗನ್, ಇತ್ತೀಚೆಗಷ್ಟೇ ಸ್ತನದ ಶಸ್ತ್ರಿ ಚಿಕಿತ್ಸೆಗೆ ಒಳಗಾಗಿದ್ದರು. ಆ ವಿಚಾರವನ್ನು ಅವರ ಕೆಲ ಸ್ನೇಹಿತರು ನಂಬಿರಲಿಲ್ಲ. ಎಲ್ಲವೂ ಸುಳ್ಳು ಎಂದು ವಾದಿಸಿದ್ದರು. ಸುದ್ದಿ ಮಾಧ್ಯಮಗಳಲ್ಲಿಯೂ ಇದು ಕೇವಲ ಒಂದು ವದಂತಿ ಎಂದೇ ಸುದ್ದಿ ಪ್ರಸಾರ ಮಾಡಲಾಗಿತ್ತು. ಜಾಲತಾಣದಲ್ಲೂ ಇದೆಲ್ಲ ರೂಮರ್ ಎಂದೇ ನೆಟ್ಟಿಗರು ಕೆಮೆಂಟಿಸಿದ್ದರು. ಇದೆಲ್ಲವನ್ನು ನೋಡಿ ಕೊನೆಗೂ ಕ್ರಿಸ್ಸಿ ಆ ನಿರ್ಧಾರಕ್ಕೆ ಬಂದೇ ಬಿಟ್ಟಿದ್ದಾರೆ.
ನೇರವಾಗಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ತನ ಸರ್ಜರಿಯ ಫೋಟೋಗಳನ್ನು ಶೇರ್ ಮಾಡಿಕೊಂಡು, ಸುಳ್ಳೆಂದು ಹೇಳುತ್ತಿದ್ದವರಿಗೆ ಫೋಟೋ ಸಮೇತ ಖಡಕ್ ಆಗಿ ಉತ್ತರ ನೀಡಿದ್ದಾರೆ. ಅಂದಹಾಗೆ ಇಬ್ಬರು ಮಕ್ಕಳನ್ನು ಹೊಮದಿರುವ ಕ್ರಿಸ್ಸಿಗೆ ನೆಚ್ಚಿನ ಬಟ್ಟೆಯನ್ನು ತೊಡಲು ಕಷ್ಟವಾಗುತ್ತಿತ್ತು. ಆ ಕಾರಣಕ್ಕೆ ಈ ಸರ್ಜರಿ ಮೊರೆ ಹೋಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಇದೀಗ ನೆಚ್ಚಿನ ಟೂ ಪಿಸ್ ಬಿಕಿನಿ ಉಡುಗೆ ತೊಟ್ಟು, ‘ತುಂಬ ದಿನಗಳ ಬಳಿಕ ಮತ್ತೆ ಟೂ ಪಿಸ್ ತೊಡುತ್ತಿದ್ದೇನೆ’ ಎಂದು ಸರ್ಜರಿ ಬಳಿಕದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಮದಹಾಗೆ 34 ವರ್ಷದ ಕ್ರಿಸ್ಸಿ ವೃತ್ತಿಯಲ್ಲಿ ಮಾಡೆಲ್ ಆಗಿದ್ದವರು. ಕಿರುತೆರೆಯಲ್ಲಿ ಹಲವು ಶೋಗಳಲ್ಲಿ ಭಾಗವಹಿಸಿದ್ದರು. ಸದ್ಯ ಪತಿ ಮತ್ತು ಇಬ್ಬರು ಮಕ್ಕಳೊಡನೆ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದಾರೆ (ಏಜೆನ್ಸೀಸ್)