

ಬೆಂಗಳೂರು: ದಿ. ನಟ ಚಿರಂಜೀವಿ ಸರ್ಜಾ ನಟನೆಯ ‘ರಣಂ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದೇ 26ಕ್ಕೆ ರಾಜ್ಯದ 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ರಣಂ’ ಚಿತ್ರ ಬಿಡುಗಡೆ ಆಗಲಿದೆ. ಆರ್.ಎಸ್. ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿರುವ ‘ರಣಂ’ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಯನ್ನು ಮುಂದೂಡುತ್ತಲೇ ಬಂದಿತ್ತು ಚಿತ್ರತಂಡ. ಇದೀಗ ಬಿಡುಗಡೆಗೆ ಕಾಲ ಕೂಡಿಬಂದಿದ್ದು, ಚಿರಂಜೀವಿ ಅವರನ್ನು ಮತ್ತೆ ಹಿರಿತೆರೆಮೇಲೆ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಲಭಿಸಿದೆ. ಚಿರಂಜೀವಿ ಸರ್ಜಾ ಡಬ್ ಮಾಡಿದ ಕೊನೇ ಸಿನಿಮಾ ಎಂಬುದು ಇನ್ನೊಂದು ವಿಶೇಷ. ವಿ.ಸಮುದ್ರ ನಿರ್ದೇಶನದ ಈ ಚಿತ್ರದಲ್ಲಿ ಚಿರು, ಚೇತನ್, ವರಲಕ್ಷ್ಮೀ ಶರತ್ ಕುಮಾರ್ ನಟಿಸಿದ್ದಾರೆ.