ಚಿರಂಜೀವಿ ಸರ್ಜಾ ಮೃತದೇಹಕ್ಕೆ ಮಾಡಿದ ಕೊವಿಡ್​-19 ಟೆಸ್ಟ್​ನ ವರದಿ ಮೂರು ತಾಸಿನ ಬಳಿಕ ಹೊರಬಿತ್ತು...

Chiranjeevi sarja 7 June 20 1
Published on

ಬೆಂಗಳೂರು: ಇಂದು ಉಸಿರಾಟದ ಸಮಸ್ಯೆ ಹಾಗೂ ಹೃದಯಾಘಾತದಿಂದ ಜಯನಗರದ ಸಾಗರ್​ ಅಪೋಲೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೊವಿಡ್​-19 ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಉಸಿರಾಟ, ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸಾವಿನ ನಂತರ ಅವರಿಗೂ ಕರೊನಾ ಇತ್ತಾ? ಎಲ್ಲಾದರೂ ಸದ್ದಿಲ್ಲದೆ ದೇಹದೊಳಗೆ ನುಸುಳಿ ಬಿಟ್ಟಿತ್ತಾ? ಅದೇ ಕಾರಣಕ್ಕೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿತ್ತಾ? ಎಂಬ ಅನುಮಾನವೂ ಸಣ್ಣದಾಗಿ ಶುರುವಾಗಿತ್ತು. ಹಾಗಾಗಿ ಆರೋಗ್ಯ ಇಲಾಖೆ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಕೊವಿಡ್​-19 ಟೆಸ್ಟ್​ಗೆ ಒಳಪಡಿಸಿಲು ಸೂಚಿಸಿತ್ತು.

ಚಿರಂಜೀವಿ ಅವರ ಕೊವಿಡ್​-19 ತಪಾಸಣೆಯ ವರದಿ ಇದೀಗ ಬಂದಿದ್ದು, ಅವರಿಗೆ ಕರೊನಾ ಸೋಂಕು ಇರಲಿಲ್ಲ ಎಂಬುದು ದೃಢಪಟ್ಟಿದೆ. ಟೆಸ್ಟ್ ಮಾಡಿದ ಮೂರೇ ಗಂಟೆಯಲ್ಲಿ ಕೊವಿಡ್​-19 ವರದಿ ನೆಗೆಟಿವ್​ ಎಂದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net