'ಅಪ್ಪ'ನಾಗುತ್ತಿರುವ ಖುಷಿಯಲ್ಲಿದ್ದರು ಚಿರು ಸರ್ಜಾ; ಮಗು ಹುಟ್ಟುವ ಮುನ್ನವೇ ಇವರು ಹೊರಟುಬಿಟ್ಟರು...

Meghana Raj 7 June 20
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ತಾರಾ ಜೋಡಿ ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ 10 ವರ್ಷ ಪ್ರೀತಿ ಮಾಡಿ, 2018ರ ಮೇ 2ರಂದು ಸಪ್ತಪದಿ ತುಳಿದು, ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು.ಇದೀಗ ಮತ್ತೊಂದು ಸಿಹಿಸುದ್ದಿ ಕೊಡುವುದರಲ್ಲಿದ್ದ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಮರಣ ಹೊಂದಿದ್ದಾರೆ.

ಮೇಘನಾ ರಾಜ್​ ಈಗ 5 ತಿಂಗಳ ಗರ್ಭಿಣಿ. ಅಪ್ಪನಾಗುತ್ತಿರುವ ಸಂತೋಷದಲ್ಲಿದ್ದ ಚಿರು, ಇನ್ನೇನು ಕೆಲವೇ ದಿನಗಳಲ್ಲಿ ಈ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಸಿದ್ಧತೆಯಲ್ಲಿದ್ದರು.

ಮೇಘನಾ ರಾಜ್​ ಗರ್ಭಿಣಿ ಎಂಬ ವಿಚಾರವನ್ನು ಹಿರಿಯ ನಟಿ ತಾರಾ ಅನುರಾಧಾ ಹೇಳಿದ್ದಾರೆ. ಶೀಘ್ರದಲ್ಲಿಯೇ ಎಲ್ಲರಿಗೂ ಸಿಹಿಸುದ್ದಿ ಕೊಡುವ ತರಾತುರಿಯಲ್ಲಿದ್ದ ಚಿರು, ಎಲ್ಲರಿಗೂ ಶಾಕ್​ ನೀಡಿ ಹೋಗಿದ್ದಾನೆ. ಮರಿ ಚಿರಂಜೀವಿಯ ಆಗಮನಕ್ಕೂ ಮೊದಲೇ ಎಲ್ಲರನ್ನೂ ಬಿಟ್ಟು ಹೋಗಿದ್ದಾನೆ ಎಂದು ಭಾವುಕರಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net