42 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ 'ಜಗದೇಕವೀರುಡು'

chiru
Published on

ಹೈದರಾಬಾದ್: ದಕ್ಷಿಣ ಭಾರತದ ಸೂಪರ್ ಸ್ಟಾರ್ ಆದ ಚಿರಂಜೀವಿ ಶನಿವಾರ 42ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ ಪಾರಂಪರಿಕ ಉಡುಗೆ ತೊಟ್ಟ ಚಿರಂಜೀವಿ ಮತ್ತು ಸುರೇಖ ಕೊನಿಡೇಲ ದಂಪತಿಯ ಚಿತ್ರವೊಂದನ್ನು ಅವರ ಪುತ್ರ ನಟ ರಾಮ್​ಚರಣ್​ ಶೇರ್ ಮಾಡಿದ್ದಾರೆ.

ಮಗಧೀರ ಚಿತ್ರದ ಖ್ಯಾತಿಯ ನಟ ರಾಮ್​ಚರಣ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮನೆಯ ಮೆಟ್ಟಿಲ ಮೇಲೆ ಕುಳಿತಿರುವ ಅಪ್ಪ-ಅಮ್ಮನ ನಗುಮೊಗದ ಫೋಟೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ "ಮೈ ಬಿಗ್ಗೆಸ್ಟ್ ಸ್ಟ್ರೆಂತ್" ಎಂದು ಬರೆದು, 42 ನೇ ವಾರ್ಷಿಕೋತ್ಸವದ ಶುಭ ಕೋರಿದ್ದಾರೆ.

ಚಿರಂಜೀವಿ ಹೆಂಡತಿ ಸುರೇಖ, ಆ ಕಾಲದ ತೆಲುಗು ನಟ ಅಲ್ಲು ರಾಮಲಿಂಗಯ್ಯ ಅವರ ಮಗಳು. ದಂಪತಿಗೆ ರಾಮ್​ಚರಣ್​ ಅಲ್ಲದೆ ಇಬ್ಬರು ಪುತ್ರಿಯರಿದ್ದಾರೆ - ಸುಶ್ಮಿತಾ ಮತ್ತು ಸ್ರೀಜಾ.

ಒಂದು ದಿನದ ಹಿಂದೆ, ಚಿರಂಜೀವಿ ಅವರ ಇಡೀ ಕುಟುಂಬ ಮತ್ತೊಂದು ಆಚರಣೆಯಲ್ಲಿ ತೊಡಗಿತ್ತು. ಸುರೇಖ ಅವರ ಜನ್ಮ ದಿನದ ಆಚರಣೆ. ಅಮ್ಮನೊಂದಿಗೆ ತಮ್ಮ ಫೋಟೋವನ್ನು ಕೂಡ ರಾಮ್​ಚರಣ್ ಶೇರ್ ಮಾಡಿದ್ದರು.

ಚಿರಂಜೀವಿ ನಟಿಸಿದ ಇತ್ತೀಚಿನ ಚಿತ್ರವೆಂದರೆ 2019 ರಲ್ಲಿ ಬಿಡುಗಡೆಯಾದ 'ರಾ ನರಸಿಂಹ ರೆಡ್ಡಿ'. ಇದೀಗ ಕೊರತಲ ಶಿವ ಅವರ ತೆಲುಗು ಚಿತ್ರ 'ಆಚಾರ್ಯ'ದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾಮ್​ಚರಣ್​, ಎಸ್.ಎಸ್.ರಾಜಮೌಳಿ ನಿರ್ದೇಶಿಸುತ್ತಿರುವ 'ಆರ್​ಆರ್​ಆರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಸ್ವಾತಂತ್ರ್ಯಹೋರಾಟಗಾರರ ಜೀವನವನ್ನು ಆಧರಿಸಿ ಹೆಣೆದಿರುವ ಕಥೆ ಇದಾಗಿದೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net