More

    ಎಲ್ಲೆಡೆ ಪೊಗರು ಹಬ್ಬ; ಮೂರೂವರೆ ವರ್ಷಗಳ ಬಳಿಕ ಧ್ರುವ ಸರ್ಜಾ ಚಿತ್ರ ಬಿಡುಗಡೆ

    ಬೆಂಗಳೂರು: ಮೂರೂವರೆ ವರ್ಷಗಳ ಬಳಿಕ ಶುಕ್ರವಾರ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರ ಬಿಡುಗಡೆಯಾಗಿದೆ. ಚಿತ್ರವು ನಾಲ್ಕು ರಾಜ್ಯಗಳಲ್ಲಿ, ಮೂರು ಭಾಷೆಗಳಲ್ಲಿ, ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಪೈಕಿ ರಾಜ್ಯದಲ್ಲಿ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ, ಬೆಂಗಳೂರಿನಲ್ಲೇ ಮಲ್ಟಿಪ್ಲೆಕ್ಸ್ ಗಳೂ ಸೇರಿ 100ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ರಿಲೀಸ್ ಆಗಿದೆ. ಬೆಂಗಳೂರೊಂದರಲ್ಲೇ ಶುಕ್ರವಾರ 600ಕ್ಕೂ ಹೆಚ್ಚು ಪ್ರದರ್ಶನಗಳಾಗಿವೆ. ಸ್ಟಾರ್ ನಟರ ಚಿತ್ರಗಳೆಂದರೆ, ರಾತ್ರಿಯಿಂದಲೇ ಪ್ರದರ್ಶನ ಪ್ರಾರಂಭವಾಗುವ ಪರಿಪಾಠವಿದೆ. ಆದರೆ, ಕೋವಿಡ್ ಕಾರಣದಿಂದ ರಾತ್ರಿ ಪ್ರದರ್ಶನಕ್ಕೆ ಅನುಮತಿ ಸಿಗದಿದ್ದರಿಂದ, ಶುಕ್ರವಾರ ಬೆಳಗ್ಗೆಯಿಂದಲೇ ಪ್ರದರ್ಶನ ಪ್ರಾರಂಭವಾಗಿದೆ. ಪದ್ಮನಾಭಗರದ ಶ್ರೀನಿವಾಸ ಸೇರಿ ಕೆಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6.45ಕ್ಕೆ ಚಿತ್ರ ಪ್ರಾರಂಭವಾಗಿದ್ದು ವಿಶೇಷವಾಗಿತ್ತು.

    ನರ್ತಕಿಯಲ್ಲಿ ಧ್ರುವ: ನರ್ತಕಿ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನಕ್ಕೆ ನಟ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಮತ್ತು ‘ಪೊಗರು’ ತಂಡದ ಸದಸ್ಯರು ಹಾಜರಿದ್ದು, ಪ್ರೇಕ್ಷಕರ ಜತೆಗೆ ಸಿನಿಮಾ ವೀಕ್ಷಿಸಿದರು. ಅವರನ್ನು ಮೆರವಣಿಗೆಯಲ್ಲಿ ಚಿತ್ರಮಂದಿರಕ್ಕೆ ಕರೆತರುವ ಮೂಲಕ, ಭರ್ಜರಿ ಸ್ವಾಗತ ನೀಡಲಾಯಿತು. ಧ್ರುವ ಅವರ ಹಲವು ಕಟೌಟ್​ಗಳನ್ನು ನರ್ತಕಿ ಚಿತ್ರಮಂದಿರದ ಎದುರು ನಿಲ್ಲಿಸಲಾಗಿದ್ದು, ಕಟೌಟ್​ಗಳಿಗೆ ಹೂವು ಮತ್ತು ಹಾಲಿನ ಅಭಿಷೇಕ ಮಾಡಲಾಯಿತು.

    ರಾಜ್ಯಾದ್ಯಂತ ಭರ್ಜರಿ ಪ್ರತಿಕ್ರಿಯೆ: ಬರೀ ಬೆಂಗಳೂರಷ್ಟೇ ಅಲ್ಲ, ರಾಜ್ಯಾದ್ಯಂತ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಉತ್ತರ ಕರ್ನಾಟಕದಲ್ಲಿ ಮುಂತಾದ ಕಡೆ ಧ್ರುವ ಸರ್ಜಾ ಅವರ ಬೃಹತ್ ಕಟೌಟ್ ನಿಲ್ಲಿಸಿ ಕ್ಷೀರಾಭಿಷೇಕ ಮಾಡಲಾಗಿದೆ. ಧ್ರುವ ಅವರ ಅಭಿಮಾನಿಗಳು ಕಟೌಟ್​ಗೆ ಬೃಹತ್ ಗಾತ್ರದ ಹಾರಗಳನ್ನು ಹಾಕಿ, ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಬಾಗಲಕೋಟೆಯಲ್ಲಿ ಅಭಿಮಾನಿಗಳು ಧ್ರುವ ಸರ್ಜಾ ಒಮ್ಮೆಯಾದರೂ ನಗರಕ್ಕೆ ಬರಲಿ ಎಂದು ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ ಚಿತ್ರ ಪ್ರದರ್ಶನವಾಗಿದ್ದು, ಏಕಪರದೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾರಣಾಂತರ ಗಳಿಂದ ರದ್ದಾಗಿದೆ. ಇದರಿಂದ ಮೈಸೂರಿನ ಧ್ರುವ ಅಭಿಮಾನಿಗಳು ನಿರಾಶರಾಗಿದ್ದು, ಏಕಪರದೆಯ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

    ಮಾರ್ಚ್ 24ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

    ಇಡೀ ಊರಿಗೇ ಕೇಳಿಸುತ್ತಿತ್ತು ಈ ಮನುಷ್ಯನ ಗೊರಕೆ; ವಿಡಿಯೋ ಕೂಡ ವೈರಲ್​ ಆಯ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts