ಛಿಛೋರೆ ಸಿನಿಮಾದಲ್ಲಿ ನಟಿಸಿದ್ದ ಅಭಿಲಾಷಾ ಪಾಟೀಲ್ ಕರೊನಾಗೆ ಬಲಿ!

corona
Published on

ಮುಂಬೈ: ಕರೊನಾ ಎರಡನೇ ಅಲೆ ಅನೇಕರನ್ನು ಬಲಿ ಪಡೆಯಲಾರಂಭಿಸದೆ. ಚಿತ್ರೋದ್ಯಮದ ಹಲವರು ಸಹ ಕರೊನಾದ ಹೊಡೆತಕ್ಕೆ ಉಸಿರನ್ನೇ ನಿಲ್ಲಿಸಿದ್ದಾರೆ. ಇದೀಗ ಮರಾಠಿಯ ಪ್ರಸಿದ್ಧ ನಟಿ ಅಭಿಲಾಷಾ ಪಾಟೀಲ್​ ಕೂಡ ಕರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಅಭಿಲಾಷಾ ಮೇ 4ರಂದು ಕರೊನಾದಿಂದಾಗಿ ಸಾವನ್ನಪ್ಪಿರುವುದಾಗಿ ಸಹಾಯಕ ನಿರ್ದೇಶಕ ಪ್ರಕಾಶ್​ ಪಾಟೇಲ್ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿ ಜಾಲತಾಣಗಳಲ್ಲಿ ಮಾಹಿತಿ ನೀಡಿರುವ ಅವರು, ಅಭಿಲಾಷಾ ಅವರೊಂದಿಗೆ ತೆಗೆಸಿಕೊಂಡ ಕೊನೆಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.

43 ವರ್ಷ ವಯಸ್ಸಾಗಿದ್ದ ನಟಿ ಅನೇಕ ಮರಾಠಿ ಸಿನಿಮಾಗಳಲ್ಲಿ ನಟಿಸಿ, ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಅಷ್ಟೇ ಅಲ್ಲದೆ ಬಾಲಿವುಡ್​ನಲ್ಲಿಯೂ ಕಾಣಿಸಿಕೊಂಡಿದ್ದರು. ಸುಶಾಂತ್​ ಸಿಂಗ್​ ಅಭಿನಯದ ಛಿಛೋರೆ ಮತ್ತು ಅಕ್ಷಯ್​ ಕುಮಾರ್​ ಅಭಿನಯದ ಗುಡ್​ ನ್ಯೂಸ್​ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದರು. ನಟಿಯ ಸಾವಿಗೆ ಸಿನಿಮಾ ಕ್ಷೇತ್ರದ ಅನೇಕರು ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net