

ಹೈದರಾಬಾದ್: ಟಾಲಿವುಡ್ ನಟಿ ಚಾರ್ಮಿ ಕೌರ್ ಮದುವೆ ಯಾವಾಗ?
ಇಂಥದ್ದೊಂದು ಪ್ರಶ್ನೆ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ತಮ್ಮ ಸಮಕಾಲೀನರೆಲ್ಲರು ಮದುವೆಯಾಗಿ, ಗಂಡ-ಮನೆ-ಮಕ್ಕಳು ಎಂದು ಸೆಟಲ್ ಆದರೂ, ಚಾರ್ಮಿ ಮಾತ್ರ ಸದ್ಯ ಮದುವೆ ಬೇಡ ಎಂದು ಹೇಳಿಕೊಂಡು ಓಡಾಡುತ್ತಿದ್ದರು.
ಇದನ್ನೂ ಓದಿ: ಮುಗಿದ ಬಿಗ್ ಬಾಸ್ ಆಟ, ಮನೆಯಲ್ಲಿಯೇ ನೋಟ
ಈ ಮಧ್ಯೆ, ಚಾರ್ಮಿ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ನಡುವೆ ಏನೋ ಇದೆ ಎಂಬ ಮಾತು ಸಹ ಟಾಲಿವುಡ್ನಲ್ಲಿ ಕೇಳಿಬಂದಿತ್ತು. ಅದಕ್ಕೆ ಕಾರಣ, ಪುರಿ ನಿರ್ದೇಶನದ ಚಿತ್ರಗಳ ಮೇಲ್ವಿಚಾರಣೆಯನ್ನು ಚಾರ್ಮಿ ವಹಿಸಿಕೊಂಡರು. ಚಿತ್ರ ನಿರ್ಮಾಣ ಹಾಗೂ ಬಿಡುಗಡೆಯಲ್ಲಿ ತೊಡಗಿಸಿಕೊಂಡರು. ಪುರಿ ಮತ್ತು ಚಾರ್ಮಿ ಲಿವ್ಇನ್ ರಿಲೇಶನ್ಶಿಪ್ನಲ್ಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದವು. ಆದರೆ, ತಾನು ಯಾರ ಜತೆಯೂ ಲಿವ್ಇನ್ ರಿಲೇಶನ್ಶಿಪ್ನಲ್ಲೂ ಇಲ್ಲ ಮತ್ತು ಯಾರನ್ನು ಮದುವೆಯಾಗುವುದೂ ಇಲ್ಲ ಎಂದು ಚಾರ್ಮಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಭದ್ರಕಾಳಿ ಸಾಯಿಪಲ್ಲವಿ; ಬರ್ತಡೇ ಗಿಫ್ಟ್
ಈ ಕುರಿತು ಮಾತನಾಡಿರುವ ಅವರು, ಸದ್ಯ ನನ್ನ ಕೆರಿಯರ್ ಉತ್ತುಂಗದಲ್ಲಿದೆ ಮತ್ತು ನನ್ನ ಜೀವನದ ಬಗ್ಗೆ ನನ್ನ ಬಹಳ ಹೆಮ್ಮೆ ಇದೆ. ಇಂಥ ಸಂದರ್ಭದಲ್ಲಿ ಮದುವೆಯಾಗುವ ತಪ್ಪನ್ನು ನಾನು ಖಂಡಿತಾ ಮಾಡುವುದಿಲ್ಲ. ನಾನು ಹೇಗಿದ್ದೇನೋ, ಬಹಳ ಸಂತೋಷವಾಗಿದ್ದೇನೆ ಎಂದು ಚಾರ್ಮಿ ಹೇಳಿಕೊಂಡಿದ್ದಾರೆ.