ರಕ್ಷಿತ್ ಹುಟ್ಟುಹಬ್ಬಕ್ಕೆ ಚಾರ್ಲಿ ಉಡುಗೊರೆ

Rakshit 6 June 20
Published on

ಕಳೆದ ವರ್ಷ ತಮ್ಮ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ, ಈ ಬಾರಿಯ ಬರ್ತಡೇಯನ್ನು ಉಡುಪಿಯಲ್ಲಿನ ತಮ್ಮ ಕುಟುಂಬದವರೊಂದಿಗೆ ಸರಳವಾಗಿ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.

ಕಳೆದ ವರ್ಷ, ರಕ್ಷಿತ್ ಹುಟ್ಟುಹಬ್ಬದಂದು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈ ವರ್ಷ ಅವರು ‘777 ಚಾರ್ಲಿ’ ಚಿತ್ರದಲ್ಲಿ ನಟಿಸುತ್ತಿದ್ದು, ಅದಿನ್ನೂ ಪೂರ್ತಿಯಾಗದ ಕಾರಣ, ಚಿತ್ರತಂಡದವರು ಹುಟ್ಟುಹಬ್ಬದ ಪ್ರಯುಕ್ತ ‘ಲೈಫ್ ಆಫ್ ಧರ್ಮ’ ಎಂಬ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದಲ್ಲದೆ ‘777 ಚಾರ್ಲಿ’ ಮತ್ತು ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ತಂಡದವರು ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ, ರಕ್ಷಿತ್​ಗೆ ಹಾರೈಸಿದ್ದಾರೆ. ಇನ್ನು, ರಕ್ಷಿತ್ ಹುಟ್ಟುಹಬ್ಬಕ್ಕೆ ಪುನೀತ್ ರಾಜಕುಮಾರ್, ರಿಷಬ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಶಾನ್ವಿ ಶ್ರೀವಾತ್ಸವ್ ಮುಂತಾದವರು ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net