ಬಿಗ್​ಬಾಸ್​ಗೆ ಚಂದ್ರಚೂಡ್ ಎಂಟ್ರಿ; ಐದನೇ ವಾರಕ್ಕೆ ವೈಲ್ಡ್ ಕಾರ್ಡ್

Chandrachood
Published on

ಬೆಂಗಳೂರು: ಬಿಗ್​ಬಾಸ್ ಸೀಸನ್ 8 ಐದನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ನಾಲ್ಕು ಸ್ಪರ್ಧಿಗಳು ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಹೀಗಿರುವಾಗಲೇ ಸರ್ಪ್ರೖೆಸ್ ರೀತಿಯಲ್ಲಿ ಹೊಸ ಸ್ಪರ್ಧಿಯೊಬ್ಬರು ಮನೆ ಪ್ರವೇಶ ಪಡೆದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಐದನೇ ವಾರಕ್ಕೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಎಂಟ್ರಿಯಾಗಿದ್ದಾರೆ. ಕಳೆದ ನಾಲ್ಕು ವಾರದಿಂದ ಸರತಿಯಾಗಿ ಧನುಶ್ರೀ, ನಿರ್ಮಲಾ ಚೆನ್ನಪ್ಪ, ಗೀತಾ ಭಾರತಿ ಮತ್ತು ಚಂದ್ರಕಲಾ ಮೋಹನ್ ಎಲಿಮಿನೇಟ್ ಆಗಿದ್ದರು. ಮನೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಿರುವಾಗಲೇ, ಇದೀಗ ಮತ್ತೊಬ್ಬ ಪುರುಷ ಅಭ್ಯರ್ಥಿಯಾಗಿ ಚಕ್ರವರ್ತಿ ಚಂದ್ರಚೂಡ ಅನಿರೀಕ್ಷಿತವಾಗಿ ಮನೆ ಪ್ರವೇಶಿಸಿ ಮನೆ ಮಂದಿಗೆ ಶಾಕ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net