ಪಾಪು ಹುಟ್ಟುಹಬ್ಬ ಆಚರಿಸಿದ ಕೂಕು!

Nivedita Gowda Final
Published on

‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡಗೆ ಹುಟ್ಟುಹಬ್ಬದ ಸಂಭ್ರಮ. ಈ ಹುಟ್ಟುಹಬ್ಬವನ್ನು ಮನೆಯಲ್ಲೇ ಗ್ರಾಂಡ್ ಆಗಿ ಆಚರಿಸಿದ್ದಾರೆ ಪತಿ ಚಂದನ್ ಶೆಟ್ಟಿ.

ಚಂದನ್ ಮತ್ತು ನಿವೇದಿತಾ ಇಬ್ಬರೂ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದು, ಅವರಿಬ್ಬರ ಮಧ್ಯೆ ಲವ್ ಆಗಿದ್ದು, ಕಳೆದ ವರ್ಷ ಮೈಸೂರಿನಲ್ಲಿ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು, ಆ ನಂತರ ಇಬ್ಬರೂ ಮದುವೆಯಾಗಿದ್ದು ... ಎಲ್ಲವೂ ಗೊತ್ತೇ ಇದೆ. ಚಂದನ್ ಅವರನ್ನು ಮದುವೆಯಾದ ಮೇಲೆ, ನಿವೇದಿತಾ ಅವರ ಮೊದಲ ಹುಟ್ಟುಹಬ್ಬ ಇದು. ಈ ಮೊದಲ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿಯೇ ಆಚರಿಸಿದ್ದಾರೆ ಚಂದನ್.

ಮನೆಯನ್ನು, ಬಣ್ಣದ ಬಲೂನುಗಳಿಂದ ಸಿಂಗರಿಸಿ, ಹುಟ್ಟುಹಬ್ಬಕ್ಕೆಂದೇ ವಿಶೇಷವಾದ ಕೇಕ್ ತಯಾರಿಸಿ ... ಈ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ಚಂದನ್. ಕೇಕ್ ಕಟ್ ಆದ ನಂತರ, ‘ನನ್ನ ರಾಣಿಗೆ ಹ್ಯಾಪಿಯಸ್ಟ್ ಬರ್ಥ್‌ಡೇ, ಲವ್ ಯೂ ಸೋ ಮಚ್ ಪಾಪು’ ಎಂದು ಚಂದನ್ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ನಿವೇದಿತಾ, ‘ಕೂಕೂ ... ಐ ಲವ್ ಯೂ ಮೋರ್ ಆ್ಯಂಡ್ ಮೋರ್ ...’ ಎಂದು ಬರೆದಿದ್ದಾರೆ.

ಲಾಕ್‌ಡೌನ್ ಶುರುವಾಗುವ ಮುನ್ನ ಚಂದನ್ ಮತ್ತು ನಿವೇದಿತಾ ಗೌಡ ಹನಿಮೂನ್‌ಗೆಂದು ಫಾರಿನ್‌ಗೆ ಹೋಗಿದ್ದರು. ಅಷ್ಟರಲ್ಲಿ ಲಾಕ್ಡೌನ್ ಘೋಣೆಯಾದ್ದರಿಂದ, ಹನಿಮೂನ್ ಮೊಟಕುಗೊಳಿಸಿ ತಕ್ಷಣವೇ ಭಾರತಕ್ಕೆ ವಾಪಸ್ಸಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net