ಧನ್ಯವಾದಗಳು ಹೆಂಡತಿ ಎಂದ ಚಂದನ್ ಕುಮಾರ್: ಯಾಕೆ? ಫೋಟೋ ವೈರಲ್!

Published on
ಒಂದೇ ಮನೆಯಲ್ಲಿ ತುಂಬಾ ನಟರು ಇದ್ದರೇ, ಅವರಿಗೆ ಒಬ್ಬರಿಗೆ ಒಬ್ಬರು ಸಮಯ ಮಿಸಲಿಡುವುದು ತುಂಬಾ ಕಷ್ಟದ ಸಂಗತಿ. ಅದರಲ್ಲೂ, ಆ ಇಬ್ಬರು ನಟರು ಗಂಡ-ಹೆಂಡತಿ ಆದರೆ ಇನ್ನೂ ಕಷ್ಟ. ಹೀಗಿದ್ದರೂ, ನಟ ಚಂದನ್ ಕುಮಾರ್ ಮತ್ತು ಅವರ ಪತ್ನಿ ನಟಿ ಕವಿತಾ ಗೌಡ ಮಾತ್ರ ಒಬ್ಬರಿಗೊಬ್ಬರು ಸಮಯಕೊಡುವುದರ ಜತೆಗೆ ತುಂಬಾ ಸಂತೋಷದಿಂದ ಕಾಲಕಳೆಯುತ್ತಾರೆ.
ಇತ್ತೀಚೆಗೆ, ಚಂದನ್ ತೆಲುಗಿನ ಒಂದು ಖ್ಯಾತ ಸೀರಿಯಲ್​​ನಲ್ಲಿ ನಟಿಸಲು ಆರಂಭಿಸಿದ್ದಾರೆ. ಹಾಗಾಗಿ, 'ಶ್ರೀಮತಿ ಶ್ರೀನಿವಾಸ್' ಸೀರಿಯಲ್​ಗೆಂದು ಹೈದರಾಬಾದ್​ನಲ್ಲಿ ಇರುವ ನಟ ದಿನನಿತ್ಯ ಜಿಮ್​ಗೆ ಹೋಗಿ ತಮ್ಮ ದೇಹವನ್ನು ಗಟ್ಟಿಗೊಳಿಸುತ್ತಿದ್ದಾರೆ. ಆದರೆ, ಮೊನ್ನೆ ಮಾತ್ರ ಪತಿಯ ಜೊತೆ ನಟಿ ಕವಿತಾ ಕೂಡ ಹೈದರಾಬಾದ್​ನ ಮಾರಿಯೋಟ್ ಹೋಟೆಲ್-ಕನ್ವೆನ್ಷನ್ ಸೆಂಟರ್​ನ ಜಿಮ್​ನಲ್ಲಿ ದೇಹ ದಂಡಿಸಿ ಗಂಡನ ಜತೆ ಒಂದಿಷ್ಟು ಸಮಯ ಎಂಜಾಯ್ ಮಾಡಿದ್ದಾರೆ. 
ಜಿಮ್​ನಲ್ಲಿ ದೇಹ ದಂಡಿಸಿದ ಈ ತಾರಾ ಜೋಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಆ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸುಮಾರು 15,000ಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು, ಸಖತ್ ಶೇರ್​ಗಳನ್ನು ಗಿಟ್ಟಿಸಿಕೊಳ್ಳುತ್ತಿದೆ. ಈ ಫೋಟೋಗೆ ನಟ ಚಂದನ್, 'ನನ್ನ ಜೊತೆ ಜಿಮ್​ನಲ್ಲಿ ಕಾಲಕಳೆದಿದ್ದಕ್ಕೆ ಧನ್ಯವಾದಗಳು ಹೆಂಡತಿ (ಕವಿತಾ)', ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಮತ್ತು, ಇದು ಜಿಮ್ ನಲ್ಲಿ ಮೊದಲ ದಿನ ಎಂದು ಹೇಳಿದ್ದಾರೆ ನಟ ಚಂದನ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net